ವಿಟಿಯು 26ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್  ಚಾಂಪಿಯನ್‌ಶಿಪ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಹ್ಯಾದ್ರಿ ಕಾಲೇಜು

ವಿಟಿಯು 26ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಹ್ಯಾದ್ರಿ ಕಾಲೇಜು


ಮಂಗಳೂರು: ಸಹ್ಯಾದ್ರಿ ಅಥ್ಲೆಟಿಕ್ ತಂಡವು 104 ಅಂಕಗಳೊಂದಿಗೆ 8ನೇ ಬಾರಿಗೆ ಹೊರಹೊಮ್ಮಿದ ಒಟ್ಟಾರೆ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿತು.

ಮಾರ್ಚ್ 15 ರಿಂದ 18 ರವರೆಗೆ ಶಿವಮೊಗ್ಗದ ಜೆಎನ್‌ಎನ್ಸಿಇಯಲ್ಲಿ ನಡೆದ ವಿಟಿಯು 26ನೇ ಅಂತರ-ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗವು ಚಾಂಪಿಯನ್ ಆಗಿ ಹೊರಹೊಮ್ಮಿತು. 


ತಂಡವು ಮಾರ್ಚ್‌ಪಾಸ್ಟ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿತು. ಒಟ್ಟು 126 ಕಾಲೇಜುಗಳಿಂದ ಒಟ್ಟು 1,434 ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸಹ್ಯಾದ್ರಿ ಕಾಲೇಜು ಹೊಸ ಚರಿತ್ರೆ ಬರೆದಿದೆ. 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ 201 ಕಾಲೇಜುಗಳಿಂದ 4 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.


ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ನೇತೃತ್ವದಲ್ಲಿ 2007-2008ರಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರಿನಲ್ಲಿ ಸ್ಥಾಪನೆಯಾಯಿತು.

2008-2009ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರಂಭಿಸಿದ್ದು, ಅಂದಿನಿಂದ ಇಂದಿನವರೆಗೆ ಸುಮಾರು 16 ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 8 ಬಾರಿ ಓವರ್ ಆಲ್ ಚಾಂಪಿಯನ್, 5 ಬಾರಿ ರನ್ನರ್ಸ್ ಹಾಗೂ 3ನೇ ಬಾರಿ 4ನೇ ಸ್ಥಾನ ಪಡೆದುಕೊಂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article