
82ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ
Tuesday, March 11, 2025
ಮಂಗಳೂರು: ಶ್ರೀ ವಿಠೋಭ ಭಜನಾ ಮಂದಿರ ಬೊಕ್ಕಪಟ್ಣ ಬೆಂಗರೆ ಇದರ 82ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವವನ್ನು ನಯನ ಮತ್ತು ನಿವೃತ್ತ ಪೊಲೀಸ್ ನಿರೀಕ್ಷ ಸುಧಾಕರ್ ಬೊಕ್ಕಪಟ್ಣ ಬೆಂಗರೆ ಅವರು ದೀಪ ಬೆಳಗಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮೇಯರ್ ಸುನೀತಾ ಸಾಲಿಯಾನ್, ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಅರವಿಂದ್ ಬೆಂಗರೆ, ಭಜನಾ ಮಂದಿರದ ಅಧ್ಯಕ್ಷ ದೇವದಾಸ್ ಬೋಳೂರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಿಶುಪಾಲ್ ಬೆಂಗರೆ ಸ್ವಾಗತಿಸಿ, ಸುಧಾಕರ್ ಬೋಳೂರು ವಂದಿಸಿದರು.