ವಿದ್ಯಾರ್ಥಿಗಳು ಪ್ರಾಮಾಣಿಕವಾಗಿದ್ದು, ತಾವು ಮಾಡುವ ಕಾರ್ಯಗಳಲ್ಲಿ ಬದ್ಧರಾಗಿರಬೇಕು: ಅಂಕುಶ್ ಎನ್. ನಾಯಕ್

ವಿದ್ಯಾರ್ಥಿಗಳು ಪ್ರಾಮಾಣಿಕವಾಗಿದ್ದು, ತಾವು ಮಾಡುವ ಕಾರ್ಯಗಳಲ್ಲಿ ಬದ್ಧರಾಗಿರಬೇಕು: ಅಂಕುಶ್ ಎನ್. ನಾಯಕ್


ಮಂಗಳೂರು: ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಗುರಿಯೊಂದಿಗೆ ಸಾಗಿದರೆ ನಾವು ಉನ್ನತಮಟ್ಟಕ್ಕೆ ಏರಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕೇವಲ ತಂದೆತಾಯಿ ಮಾತ್ರವಲ್ಲದೆ ಶಿಕ್ಷಕರ ಪರಿಶ್ರಮ ಅಪಾರವಾಗಿರುತ್ತದೆ. ಇದನ್ನು ಯಾವತ್ತು ಮರೆಯಬಾರದು. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿದ್ದು, ತಾವು ಮಾಡುವ ಕಾರ್ಯಗಳಲ್ಲಿ ಬದ್ಧರಾಗಿರಬೇಕು. ಭವಿಷ್ಯದ ಜೀವನ ಹಾಗೂ ವೃತ್ತಿಜೀವನದಲ್ಲಿ ನೈತಿಕತೆಯನ್ನು ಕಾಪಾಡಿಕೊಳ್ಳಬೇಕೆಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್ ಹೇಳಿದರು.


ಅವರು ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ‘ಪದವಿ ಪ್ರದಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


‘ಹೌದು ನಾನು ಅದನ್ನು ಮಾಡಬಹುದು’ ಎಂಬ ಆತ್ಮವಿಶ್ವಾಸ ಮತ್ತು ನಿರ್ಣಯದೊಂದಿಗೆ ಯಶಸ್ಸಿನತ್ತ ಹೆಜ್ಜೆಗಳನ್ನು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಇಡಬೇಕು ಎಂದು ಸಲಹೆ ನೀಡಿದರು.


ವಿದ್ಯಾರ್ಥಿಗಳು ಅಧ್ಯಾಯನಶೀಲತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಧನೆಯನ್ನು ಮಾಡಿ ಹೆತ್ತವರ ಕನಸುಗಳನ್ನು ಈಡೇರಿಸಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಾವೆಷ್ಟೇ ಉನ್ನತಮಟ್ಟಕ್ಕೇರಿದರೂ ತಾನು ಕಲಿತ ವಿದ್ಯಾಸಂಸ್ಥೆಯ ಜೊತೆ ನಿರಂತರ ಒಡನಾಟ ಹೊಂದಿರಬೇಕು. ಹಳೆ ವಿದ್ಯಾರ್ಥಿಗಳ ಒಕ್ಕೂಟವಾದ ‘ಎಕ್ಸ್ ಸಂಗಮ್’ ಎಂಬ ಕಾರ್ಯಕ್ರಮಕ್ಕೆ ಸಕ್ರಿಯವಾಗಿ ಭಾಗಿಯಾಗಬೇಕು. ಈ ಸಂಸ್ಥೆಯು ವಿದ್ಯಾರ್ಥಿಗಳಿಂದ ನಿರೀಕ್ಷೆ ಮಾಡುವುದು ಕೇವಲ ಅಪರಿಮಿತವಾದ ಪ್ರೀತಿಯನ್ನು ಮಾತ್ರ ಎಂದರು.


ಪದವಿ ಪೂರ್ವ ಹಂತದಲ್ಲಿ ಕಠಿಣ ಪರಿಶ್ರಮ, ಶಿಸ್ತು ಅಳವಡಿಸಿಕೊಂಡರೆ ಮುಂದಿನ ಹಂತದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮುಂಬರಲಿರುವ ಕೆಸಿಇಟಿ ಪರೀಕ್ಷೆಯನ್ನು ಕೂಡ ಗಂಭೀರವಾಗಿ ಪರಿಗಣಿಸಲು ಸಲಹೆ ನೀಡಿದರು.


ಇದೇ ವೇಳೆ ಶೈಕ್ಷಣಿಕ ಸಾಲಿನ ಮ್ಯಾಗಜೀನ್ ಎಕ್ಸ್‌ಪ್ಲೋರ್ ಅನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿರುವ ಉಸ್ತಾದ್ ರಫೀಕ್ ಖಾನ್ ಅವರು ಬಿಡುಗಡೆಗೊಳಿಸಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. 2023-25ರ ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಈ ಸಂದಂರ್ಭದಲ್ಲಿ ವಿದ್ಯಾರ್ಥಿಗಳು ತಾವು ಕಾಲೇಜಿನಲ್ಲಿ ಕಳೆದ ಎರಡು ವರ್ಷದ ಸವಿ ನೆನಪುಗಳನ್ನು ಮೆಲುಕು ಹಾಕುತ್ತ ತಮ್ಮ ಸಿಹಿಕಹಿಯ ಅನುಭವಗಳನ್ನು ಹಂಚಿಕೊಂಡು ಭಾವುಕರಾದರು.

ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಕೋರ್‌ಕಮಿಟಿ ಸದಸ್ಯ ಬಿ. ವಿನಯ್ ಕುಮಾರ್, ಕೋಚಿಂಗ್ ಕಾಡಿನೇಟರ್ ಕರುಣಾಕರ್ ಬಳ್ಕೂರ್, ಕೋಚಿಂಗ್ ಅಸಿಸ್ಟೆಂಟ್ ಕೋಡಿನೇಟರ್ ಪ್ರಮೋದ್ ಕಿಣಿ, ಬೌತಶಾಸ್ತ್ರ ಉಪನ್ಯಾಸಕಿ ರಾಧಿಕಾ ಭಟ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕಿ ಸೌಮ್ಯ ಕೆ. ಉಪಸ್ಥಿತರಿದ್ದರು. 

ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪೃಥ್ವಿ ಡಿ’ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾರ್ಥಿ ಪರಿಷತ್‌ನ ಸಹಕಾರ್ಯದರ್ಶಿ ಪ್ರಣೀತ ವಂದಿಸಿದರು. ಕಾರ್ಯಕ್ರಮದ ಸಂಯೋಜಕಿ ಶ್ವೇತಾ ಸುವರ್ಣ ಹಾಗೂ ಇನ್ನಿತರ ಸಹೊದ್ಯೋಗಿ ವರ್ಗದವರು ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article