
ಕಬ್ಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ: ಕ್ರಮಕ್ಕೆ ಮನವಿ
Saturday, March 22, 2025
ಮಂಗಳೂರು: ಉಡುಪಿಯಲ್ಲಿ ಮೀನು ಕದ್ದ ಕಾರಣಕೊಟ್ಟು ಕಾರ್ಮಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಿಜಕ್ಕೂ ಖೇದಕರ. ಸಂಸ್ಕೃತಿಯ ನಾಡು ದೇಗುಲಗಳ ಬೀಡು ಎಂದೇ ಕರೆಯಲ್ಪಡುವ ಉಡುಪಿ ಜಿಲ್ಲೆಗೆ ಇಂತಹ ಘಟನೆಗಳು ಶೋಭೆ ತರುವಂತದ್ದಲ್ಲ. ಘಟನೆ ಕುರಿತು ಸೂಕ್ತ ಕ್ರಮಕ್ಕೆ ನಾಗರಿಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವರಲ್ಲಿ ಘಟನೆಯನ್ನು ವಿವರಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ.
ಮುಂದೆ ಇಂತಹ ಕೃತ್ಯ ನಾಗರಿಕ ಸಮಾಜದಲ್ಲಿ ಜರುಗದಂತೆ ಎಚ್ಚರಿಕೆ ವಹಿಸುವಂತೆ ಸಭ್ಯ ನಾಗರಿಕರು ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.