
ಸಾಮರಸ್ಯ ಮಂಗಳೂರು ವತಿಯಿಂದ ಪೊಲೀಸ್ ಅಧಿಕರಿ, ಸಿಬ್ಬಂದಿಗಳಿಗೆ ಅಭಿನಂದನೆ
Tuesday, March 18, 2025
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರ ಕಠಿಣ ಪರಿಶ್ರಮದಿಂದ ರಾಜ್ಯದ ಇತಿಹಾಸದಲ್ಲೇ 75 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ವಶಪಡಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಾಮರಸ್ಯ ಮಂಗಳೂರು ಪರವಾಗಿ ಅಭಿನಂದಿಸಿ, ಗೌರವಿಸಲಾಯಿತು.
ಅಧಿಕಾರಿಗಳಾದ ಮನೋಜ್ ಕುಮಾರ್, ರಫೀಕ್, ಸುದೀಪ್, ಶರಣಪ್ಪ, ನರೇಂದ್ರ ಮತ್ತಿತರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ್ ಭಟ್, ಸಾಮರಸ್ಯ ಮಂಗಳೂರು ಸಂಘಟನೆ ಅಧ್ಯಕ್ಷೆ ಮಂಜುಳಾ ನಾಯಕ್ ಹಾಗೂ ಪದಾಧಿಕಾರಿಗಳಾದ ನೀತ್ ಶರಣ್, ರಾಜೇಶ್ ದೇವಾಡಿಗ, ಯೋಗೀಶ್ ನಾಯಕ್, ಟಿಸಿ ಗಣೇಶ್, ಜಯರಾಜ್ ಕೋಟಿಯಾನ್, ವಿದ್ಯಾ ಶೆಣೈ, ಮಮತಾ ಕುಡ್ವ, ರಾಧಿಕಾ ನಾಯಕ್ ಮತ್ತಿತರು ಉಪಸ್ಥಿತರಿದ್ದರು.