ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರ ಟೆರೇಸ್ ಕೃಷಿ ತೋಟಕ್ಕೆ ಮೇಜರ್ ಡಾ. ಜಯರಾಜ್ ಎನ್. ಅವರ ನೇತೃತ್ವದಲ್ಲಿ ಎನ್.ಸಿಸಿ ಕೆಡೆಟ್ ಭೇಟಿ

ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರ ಟೆರೇಸ್ ಕೃಷಿ ತೋಟಕ್ಕೆ ಮೇಜರ್ ಡಾ. ಜಯರಾಜ್ ಎನ್. ಅವರ ನೇತೃತ್ವದಲ್ಲಿ ಎನ್.ಸಿಸಿ ಕೆಡೆಟ್ ಭೇಟಿ


ಮಂಗಳೂರು: ಹಸಿರು ಪ್ರೇಮಿ, ಟೆರೇಸ್ ಕೃಷಿಕ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರ ಟೆರೇಸ್ ಕೃಷಿ ತೋಟ ವೀಕ್ಷಿಸಲು ಮಂಗಳೂರು ವಿವಿ ಕಾಲೇಜಿನ‌ ಎನ್.ಸಿ.ಸಿ ಭೂದಳದ ಅಸೋಸಿಯೇಟ್ ಆಫೀಸರ್ ಮೇಜರ್ ಡಾ. ಜಯರಾಜ್ ಎನ್. ಅವರ ನೇತೃತ್ವದಲ್ಲಿ ಕೆಡೆಟ್ ಗಳು ಭೇಟಿ ನೀಡಿದರು.

ಶ್ರದ್ಧೆ, ವಿನಯತೆ, ದೃಢತೆ, ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುವ ತೆರೆಮೆರೆಯ ಸಾಧಕರಲ್ಲಿ ಒಬ್ಬರಾಗಿರುವ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರು ಹುಟ್ಟಿದ್ದು ಸುಳ್ಯ ತಾಲೂಕಿನ ಅಜ್ಜಾವರದಲ್ಲಿ. ಕೃಷಿಕ ಕುಟುಂಬದಿಂದ ಬಂದವರಾದ ಇವರು ಪದವಿ ಪೂರ್ವ ಶಿಕ್ಷಣದ ನಂತರ ಟೆರೇಸ್ ತೋಟದ ಕೃಷಿಯಲ್ಲಿ ಆಸಕ್ತಿವಹಿಸಿ ತನ್ನ ಜೀವನದ ಭಾಗವಾಗಿಸಿಕೊಂಡಿದ್ದಾರೆ.


ಟೆರೇಸ್ ತೋಟದ ವಿಶೇಷತೆಗಳು:

ಟೆರೇಸ್ ತೋಟದಲ್ಲಿ ಪ್ರಾರಂಭದಲ್ಲಿ ತರಕಾರಿ ಸಸ್ಯಗಳಾದ ಟೊಮೇಟೊ, ಬದನೆ, ಬೆಂಡೆ, ಹೀರೇಕಾಯಿ ಸಸ್ಯಗಳನ್ನು ಬೆಳೆಯುತ್ತ ನಂತರ ಕಾಲಕ್ರಮೇಣ ಮಾಳಿಗೆ ಮೇಲೆ ಹಲವು ಪ್ರಭೇದದ ಭತ್ತದ ತಳಿಗಳನ್ನು ಬೆಳೆಸಿದ್ದಾರೆ. ದುಡಿತವೇ ಜೀವನದ ಅಂತಿಮ ಸಾಧನೆಯೆಂದು ನಂಬಿರುವ ಅವರು ಸಾಧ್ಯವಾದಷ್ಟು ವೈವಿದ್ಯಮಯ ಹೂವಿನ ಸಸ್ಯಗಳು, ಹಣ್ಣಿನ ಗಿಡಗಳು, ತರಕಾರಿ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುತ್ತಿರುವುದು ವಿಶೇಷ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article