ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್, ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಖುಷಿ ಪಟ್ಟ ಸ್ವಚ್ಛತಾ ಕೆಲಸಗಾರರು

ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್, ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಖುಷಿ ಪಟ್ಟ ಸ್ವಚ್ಛತಾ ಕೆಲಸಗಾರರು


ಮಂಗಳೂರು: ಅಲ್ ಕಸ್ವ ಫ್ರೆಂಡ್ಸ್ ತಂಡದ ರಂಜಾನ್ ತಿಂಗಳ ಸೌಹಾರ್ದ ಸಾಮೂಹಿಕ ಇಫ್ತಾರ್ ಕಾರ್ಯಕ್ರಮದ 26ನೇ ದಿನದ ಅತಿಥಿಗಳಾಗಿ ನಗರದ ಪೌರ ಕಾರ್ಮಿಕರು ಭಾಗವಹಿಸಿದರು.


ಈ ಸಂಧರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಪೌರ ಕಾರ್ಮಿಕರೂ ಜನ ಸಮುದಾಯದ ಅಂಗವಾಗಿದ್ದಾರೆ ಅವರಿಲ್ಲದೆ ಪರಿಪೂರ್ಣ ಸಮಾಜ ಆಗಲು ಸಾಧ್ಯವಿಲ್ಲ. ನಗರದ ದೈನಂದಿನ ಚಟುವಟಿಕೆ ಆರಂಭಗೊಳ್ಳುವುದೇ ಪೌರ ಕಾರ್ಮಿಕರಿಂದ ದಿನನಿತ್ಯ ರಸ್ತೆ ಗುಡಿಸಿ, ಚರಂಡಿ ಸ್ವಚ್ಛಗೊಳಿಸಿ ಕೊಟ್ಟಿರುವುದರಿಂದಲೇ ನಗರದ ಜನರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು.


ಮಳೆ ಬಿಸಿಲು ಲೆಕ್ಕಿಸದೆ ನಗರದ ಜನರಿಗಾಗಿ ದುಡಿಯುವ ಪೌರ ಕಾರ್ಮಿಕರೂ ಸಮಾಜದ ಅವಿಭಾಜ್ಯ ಅಂಗ ಎಂದು ಪರಿಗಣಿಸದೆ ಅವರನ್ನು ನಿರ್ಲಕ್ಷ್ಯ ಮಾಡಬಾರದು. ಯಾವುದೇ ಹಬ್ಬ ಆಚರಣೆಗಳು ಎಲ್ಲರನ್ನು ಒಳಗೊಂಡು ನಡೆದಾಗ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬಲಗೊಳ್ಳಲು ಸಾಧ್ಯ ಎಂದು ಇಮ್ತಿಯಾಜ್ ಹೇಳಿದರು. ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಅವಿಸ್ಮರಣೀಯ ಮತ್ತು ಐತಿಹಾಸಿಕವಾದ ಕ್ರಾಂತಿಕಾರಕ ಸಮಾಜ ಸುಧಾರಣೆಯ ಹೆಜ್ಜೆ ಎಂದು ಹೇಳಿದರು


ಅಲ್ ಕಸ್ವ ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರಾದ ನಜೀರ್ ಕುದ್ರೋಳಿ ಪೌರ ಕಾರ್ಮಿಕರಿಗೆ ಶಾಲು ಹಾಕಿ ಸ್ವಾಗತಿಸಿದರು. ಸಾಮೂಹಿಕ ಇಫ್ತಾರ್ ಕಾರ್ಯಕ್ರಮದಲ್ಲಿ ಹರ್ಷ ವ್ಯಕ್ತಪಡಿಸಿದ ಪೌರ ಕಾರ್ಮಿಕರು ಕಸ ಗುಡಿಸಲು ಮಾತ್ರ ಬಳಸುತ್ತಿದ್ದ ನಮ್ಮನ್ನು ಕರೆಸಿ ಗೌರವಿಸಿದ್ದು ಖುಷಿ ತಂದಿದೆ ಎಂದು ಪೌರ ಕಾರ್ಮಿಕರು ಅಭಿಪ್ರಾಯ ವ್ಯಕ್ತಪಡಿಸಿದರು.


ಪೌರ ಕಾರ್ಮಿಕೆ ಗಂಗೂ ಬಾಯಿ ಖಜೂರ ಹಂಚಿದರು.


ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಮುಖಂಡರಾದ ಜಯ ಮಧ್ಯ, ಶಿವಾನಂದ, ನಾಗರಾಜ್, ಲಕ್ಕಮ್ಮ, ಶಾಂತ, ಲಕ್ಷ್ಮಿ ರಮೇಶ್ ಮತ್ತು ಅಲ್ ಕಸ್ವ ಫ್ರೆಂಡ್ಸ್ ಗ್ರೂಪಿನ ಪ್ರಮುಖರಾದ, ಅಶ್ರರ್ ಬಂದರ್, ರಾಹಿಲ್ ಬಂದರ್, ಸಿರಾಜ್ ಮಂಜೇಶ್ವರ, ರಿಫಾಯಿ ಕಣ್ಣೂರು, ಸಮದ್ ಕುದ್ರೋಳಿ, ಅಶ್ರಫ್ ಪಾಂಡೇಶ್ವರ, ರಶೀದ್ ಮಾಣಿ, ಹಾರಿಸ್ ಪುತ್ತೂರು, ಅನೀಸ್, ಜಾಬೀರ್, ತೋಸೀಫ್, ಸಿದ್ದಿಕ್, ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article