ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!: ಅಡುಗೆ ಅನಿಲದ ಬೆಲೆ 50 ರೂ. ಹೆಚ್ಚಳ
Monday, April 7, 2025
ನವದೆಹಲಿ: ಕಳೆದ ವಾರ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದೆ.
14.2 ಕಿ.ಲೋ. LPG ಬೆಲೆಯನ್ನು ಸಿಲಿಂಡರ್ ಗೆ 50 ರೂ.ನಷ್ಟು ಹೆಚ್ಚಳ ಮಾಡಿದೆ ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ ಕೇಂದ್ರ ತೈಲ ಸಚಿವ ಹಾರ್ದಿಪ್ ಸಿಂಗ್ ಪುರಿ ಅವರು LPG ಬೆಲೆ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
14.2 ಕಿ.ಲೋ. LPG ಸಿಲಿಂಡರ್ ಬೆಲೆ 803 ರೂ. ಇದ್ದದ್ದು, 853 ರೂ.ಗೆ ಏರಿಕೆಯಾಗಿದೆ ಉಜ್ವಲ ಸ್ಕೀಮ್ ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ LPG ಸಿಗುತ್ತದಾದರೂ ಅವರಿಗೂ ಕೂಡ 50 ರೂ. ಆಗಿದೆ. 503 ರೂ. ಇದ್ದ ಬೆಲೆ 553 ರೂ.ಗೆ ಹೆಚ್ಚಳವಾಗಿದೆ.