
ಪಹಲ್ಗಾಮ್ ದಾಳಿ ಹತ್ಯೆ: ಮುಸ್ಲಿಮ್ ಒಕ್ಕೂಟ ಖಂಡನೆ
Wednesday, April 23, 2025
ಮಂಗಳೂರು: ಕಾಶ್ಮೀರದಲ್ಲಿ ನಿನ್ನೆ ನಡೆದ ಉಗ್ರ ದಾಳಿ ಮತ್ತು ಪ್ರವಾಸಿಗರ ಮೇಲಿನ ಗುಂಪು ಹತ್ಯೆ, 28 ಜನರ ಸಾವು ಖಂಡನೀಯ.
ಉಗ್ರರ ಕೃತ್ಯವನ್ನು ಘನ ಭಾಷೆಯಲ್ಲಿ ಎದುರಿಸಬೇಕಾಗಿದೆ. ಉಗ್ರರ ಕೃತ್ಯವು ಮಾನವೀಯ ಮೌಲ್ಯವನ್ನು ದುರಂತಕ್ಕೀಡು ಮಾಡುವಂತಾಗಿದೆ. ಉಗ್ರರ ಕೃತ್ಯವನ್ನು ಸಮಗ್ರ ರೂಪದಲ್ಲಿ ತನಿಖೆ ನಡೆಸಬೇಕಾಗಿದೆ. ಪ್ರವಾಸಿಗ ಸಂತ್ರಸ್ತರಲ್ಲಿ ಕರ್ನಾಟಕದವರು ಇರುವುದು ಬಹು ನೋವಿನ ವಿಚಾರ. ಕಾಶ್ಮೀರವು ಒಂದು ಸಮೃದ್ಧ ಸ್ಥಿತಿಗೆ ತಲುಪುವ ಈ ಸಂದರ್ಭ ಇಂತಹ ಕೃತ್ಯ ಯಾವುದೇ ಕಾರಣಕ್ಕೂ ಸ್ವೀಕರಿಸುವಂತದ್ದಲ್ಲ. ರಕ್ತಪಾತದಿಂದ ಎಂದಿಗೂ ಶಾಂತಿ ನೆಲೆಗೊಳ್ಳದು ಎಂಬುದನ್ನು ಸರ್ವರೂ ಅರಿಯಬೇಕಿದೆ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.