
ಮುಸ್ಲಿಮರಾದರೆ ಕ್ಷಮಾಧಾನ, ಹಿಂದೂ ಎಂದವರ ಹಣೆಗೆ ಗುಂಡು: ನಂದನ್ ಮಲ್ಯ
ಮಂಗಳೂರು: ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಕೆಲವರು ವಾದಿಸುತ್ತಿದ್ದರು. ಆದರೆ ಜಮ್ಮುಕಾಶ್ಮೀರದ ಪಹಲ್ಗಾಂವ್‌ನಲ್ಲಿ ಬಂದೂಕು ಹಿಡಿದು ಬಂದ ಉಗ್ರರು ಮೊದಲು ಕೇಳಿದ್ದೇ ನಿನ್ನ ಧರ್ಮ ಯಾವುದು ಎನ್ನುವ ಪ್ರಶ್ನೆಯನ್ನು. ಮುಸ್ಲಿಮರಾದರೆ ಕ್ಷಮಾಧಾನ, ಅದೇ ಹಿಂದೂ ಎಂದವರ ಹಣೆಗೆ ಗುಂಡು ಇಳಿಸಿಬಿಟ್ಟರು ಎಂದು ದ.ಕ. ಬಿಜೆಪಿ ಜಿಲ್ಲಧ್ಯಕ್ಷ ನಂದನ್ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದೇಶದಲ್ಲಿ ಹಿಂದೂಗಳು ಜಾತಿ ಜಾತಿ ಎಂದು ಕಿತ್ತಾಡುತ್ತಿದ್ದಾರೆ. ಹಿಂದಿವಾಲ, ಕನ್ನಡಿಗ, ಮರಾಠಿಗ, ತಮಿಳಿಗ ಅಂತ ಹೊಡೆದಾಡಿಕೊಳ್ಳುತ್ತಿದ್ದೇವೆ. ಉತ್ತರ ದಕ್ಷಿಣ ಅಂತ ನಮಗೆ ನಾವೆ ಬೇಲಿ ಹಾಕಿಕೊಳ್ಳುತ್ತಿದ್ದೇವೆ. ಆದರೇ ಈ ದಾಳಿಯಲ್ಲಿ ಯಾವ ಉಗ್ರನೂ ಹಿಂದೂವಿನ ಹಣೆಗೆ ಬಂದೂಕು ಇಟ್ಟಾಗ ಅವರ ಜಾತಿ ಕೇಳಲಿಲ್ಲ. ಅವರ ಭಾಷೆ ಯಾವುದು ಕೇಳಲಿಲ್ಲ. ಉತ್ತರದವರೋ? ದಕ್ಷಿಣದವರೋ ಎಂದು ಪ್ರಶ್ನಿಸಲಿಲ್ಲ. ಕೇವಲ ಧರ್ಮವನ್ನ ಕೇಳಿದ್ರು. ಬಟ್ಟೆ ಬಿಚ್ಚಿಸಿ ಅವರು ಹಿಂದೂವೇನಾ ಅನ್ನೋ ಸ್ಪಷ್ಟತೆಯನ್ನ ತೆಗೆದುಕೊಂಡು ಸಾಯಿಸಿದ್ರು.
ಮಕ್ಕಳ ಎದುರಲ್ಲೇ ಭೀಕರವಾಗಿ ತಂದೆಯನ್ನ ಕೊಂದು, ಅವರ ಪತ್ನಿಯರನ್ನ ಹಾಗೆ ಬಿಟ್ಟು ಮೋದಿಗೆ ಹೋಗಿ ಹೇಳಿ ಎನ್ನುವ ಸಂದೇಶ ಕೊಟ್ಟು ಕಳಿಸ್ತಾರೆ. ಅಂದ್ರೆ ಅವರ ಟಾರ್ಗೆಟ್ ಭಾರತ, ಭಾರತ ಸರ್ಕಾರ ಹಾಗೂ ಮೋದಿ.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ, ಆರ್ಟಿಕಲ್ 370ಯನ್ನು ರದ್ದು ಮಾಡಿದ್ರು. ಕಾಶ್ಮೀರದಲ್ಲಿ ಚುನಾವಣೆ ನಡೆಯಿತು. ಪ್ರವಾಸಿಗರನ್ನು ಕೈ ಬೀಸಿ ಕರೆಯಿತು. ಇದೆಲ್ಲವನ್ನ ಸಹಿಸಿಕೊಳ್ಳಲಾಗದೆ ಅಮಾಯಕರ ಮೇಲೆ ಉಗ್ರರು ದಾಳಿಯನ್ನ ನಡೆಸಲಾಗಿದೆ. ದಾಳಿಯಲ್ಲಿ ಸುಮಾರು 28 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಇದೆ. ಇದರಲ್ಲಿ ಕೆಲ ಕನ್ನಡಿಗರು ಕೂಡ ಇದ್ದಾರೆ. ಅವರೆಲ್ಲರ ಆತ್ಮಕ್ಕೆ ಶಾಂತಿ ದೊರಕಲಿ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ವಿಶ್ವಾಸವಿದೆ. ಪುಲ್ವಾಮಾ ದಾಳಿಯ ಪ್ರತೀಕಾರಕ್ಕಿಂತಲೂ ಭಯಾನಕವಾದ ಉತ್ತರವನ್ನ ಮೋದಿ ಅವರು ಕಂಡಿತಾ ಕೊಡಲಿದ್ದಾರೆ. ಈಗಾಗಲೇ ಮೂಲಗಳ ಪ್ರಕಾರ ಇಬ್ಬರು ಉಗ್ರರನ್ನ ನಮ್ಮ ಸೇನೆ ಹೊಡೆದು ಹಾಕಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಪಾಠ ಕಲಿಸುವುದು ನಿಶ್ಚಿತ ಎಂದು ನಂದನ್ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.