ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಅಂಬೇಡ್ಕರ್ ದಿನಾಚರಣೆ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಅಂಬೇಡ್ಕರ್ ದಿನಾಚರಣೆ


ಪುತ್ತೂರು: ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚಿಸಲಾದ ಭಾರತೀಯ ಸಂವಿಧಾನವು ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಎಂಬಿತ್ಯಾದಿ ವಿಚಾರಗಳನ್ನು ಪ್ರತಿಪಾದಿಸುತ್ತದೆ. ಸಂವಿಧಾನವನ್ನು ಗೌರವಿಸುವುದು ಹಾಗೂ ರಕ್ಷಿಸುವುದು ವಿದ್ಯಾರ್ಥಿಗಳ ಕರ್ತವ್ಯ’ ಎಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಎಂ. ಹೇಳಿದರು.


ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕವು ಆಯೋಜಿಸಿದ ‘ಅಂಬೇಡ್ಕರ್ ಜಯಂತಿ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಎನ್‌ಎಸ್‌ಎಸ್ ಅಧಿಕಾರಿಯಾದ ಡಾ. ಚಂದ್ರಶೇಖರ ಕೆ. ಮಾತನಾಡಿ, ಸಂವಿಧಾನವು ನಮಗೆ ಹಕ್ಕು ಮತ್ತು ಕರ್ತವ್ಯಗಳು ಎರಡನ್ನೂ ಕೊಟ್ಟಿದೆ. ನಾವು ಹಕ್ಕುಗಳನ್ನು ಹೇಗೆ ಬಯಸುತ್ತೇವೆಯೋ ಅದೇ ರೀತಿ ಕರ್ತವ್ಯಗಳನ್ನು ಪಾಲಿಸುವುದು ಕೂಡ ಅಗತ್ಯ ಎಂದು ಹೇಳಿದರು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

‘ಅಂಬೇಡ್ಕರ್ ಮತ್ತು ಸಂವಿಧಾನ’ ಎಂಬ ವಿಷಯದ ಕುರಿತು ಎನ್‌ಎಸ್‌ಎಸ್ ಸ್ವಯಂಸೇವಕಿಯರಾದ ಪುಣ್ಯ, ಗಾಯತ್ರಿ, ಲವಿಕಾ ಇವರು ಪ್ರಬಂಧ ಮಂಡನೆ ಮಾಡಿದರು.

ಗ್ರೀಷ್ಮ ಮತ್ತು ತಂಡದವರು ಪ್ರಾರ್ಥಿಸಿ, ಎನ್‌ಎಸ್‌ಎಸ್ ಘಟಕ ನಾಯಕಿ ಅರ್ಚನಾ ಕೆ. ಅವರು ಸ್ವಾಗತಿಸಿ, ವಿಷ್ಣುಜಿತ್ ಎಂ. ವಂದಿಸಿ, ಘಟಕ ನಾಯಕಿ ಕಾವ್ಯ ಹೆಚ್. ರಾವ್ ನಿರೂಪಿಸಿದರು.

ಎನ್‌ಎಸ್‌ಎಸ್ ಅಧಿಕಾರಿ ಪುಷ್ಪ ಎನ್., ಘಟಕ ನಾಯಕ ಕೆವಿನ್, ಕಾರ್ಯದರ್ಶಿ ನಿರಂಜನ್, ಉಪನ್ಯಾಸಕರಾದ ಹರ್ಷಿತ್ ಹಾಗೂ ಪೃಥ್ವಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article