‘ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ’: ಅತಿಥಿ ಉಪನ್ಯಾಸ

‘ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ’: ಅತಿಥಿ ಉಪನ್ಯಾಸ


ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ, ಗಣಿತಶಾಸ್ತ್ರ ವಿಭಾಗವು (ಯುಜಿ ಮತ್ತು ಪಿಜಿ) ಗಣಿತ ಹಾಗೂ ಕೃತಕ ಬುದ್ಧಿಮತ್ತೆ ನಡುವಿನ ಅಂತರಸಂಬಂಧವನ್ನು ಅರ್ಥೈಸುವ ‘ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ’ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಮಾನಂದ ಎಚ್.ಎಸ್. ಅವರು ಹೇಗೆ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಒಳಗೊಂಡಿದೆ ಎಂಬುದನ್ನು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೀಜಿನ ಪ್ರಾಂಶುಪಾಲರಾದ ವಂ. ಡಾ. ಆಂಟೋನಿ ಪ್ರಕಾಶ್ ಮೊಂತೆರೋ ಅವರು, ಕೃತಕಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ವಿವರಿಸಿದರು ಹಾಗೂ ಕೃತಕಬುದ್ಧಿಮತ್ತೆಯನ್ನು ಅರ್ಥೈಸಲು ಹೇಗೆ ಗಣಿತದ ಜ್ಞಾನ ಬಹಳ ಅಗತ್ಯವೆಂದರು.


ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸ್ನಾತಕೋತರ ವಿಭಾಗದ ಕೊ-ಆರ್ಡಿನೇಟರ್ ಪ್ರೊ. ಗಣೇಶ್ ಭಟ್ ಅವರು ವಿದ್ಯಾರ್ಥಿಗಳ ಸಾಧನೆಯ ಕುರಿತು ತಿಳಿಸಿದರು.

ದ್ವಿತೀಯ ವರ್ಷದ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ನವ್ಯಶ್ರೀ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದಕ್ಕಾಗಿ ಗೌರವಿಸಲಾಯಿತು.

ಸಹಾಯಕ ಪ್ರಾಧ್ಯಾಪಕರುಗಳಾದ ವಾರಿಜಾ ಎಂ., ರಕ್ಷಿತಾ ಶೆಟ್ಟಿ, ದೀಪಿಕಾ, ಅಂಜು ಜೋಸೆಫ್ ಉಪಸ್ಥಿತರಿದ್ದರು.

ಕಾರ್ಯಕ್ರಮವು ಮಾನಸ ಮತ್ತು ತಂಡದವರ ಪ್ರಾರ್ಥನೆ ನಡೆಸಿದರು. ತನುಜಾ ಎನ್.ಪಿ., ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು (ಯುಜಿ) ಸ್ವಾಗತಿಸಿದರು. ಪ್ರತೀಕ್ಷಾ, ಸಹಾಯಕ ಪ್ರಾಧ್ಯಾಪಕರು, ಗಣಿತಶಾಸ್ತ್ರ ವಿಭಾಗ (ಪಿಜಿ) ವಂದಿಸಿದರು. ದ್ವಿತೀಯ ವರ್ಷದ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ನೇಹಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article