
ಕುಕ್ಕೆ ಸುಬ್ರಹ್ಮಣ್ಯ: ಗುಡುಗು ಸಹಿತ ಮಳೆ
Saturday, April 26, 2025
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಸಂಜೆ ಗಂಟೆ 6.30ರ ಬಳಿಕ ಗುಡುಗು ಸಹಿತ ಮಳೆ ಮಳೆ ಆರಂಭಗೊಂಡಿದ್ದು, ಒಂದು ಗಂಟೆ ಅವಧಿ ಉತ್ತಮ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಕೈಕಂಬ, ಕುಲ್ಕುಂದ, ಬಿಳಿನೆಲೆ, ಐನೆಕಿದು, ಏನೆಕಲ್ಲು, ಬಳ್ಪ, ಗುತ್ತಿಗಾರು, ಕೊಲ್ಲಮೊಗ್ರು ಪರಿಸದಲ್ಲೂ ಮಳೆಯಾಗಿದೆ. ಸುಳ್ಯ ತಾಲೂಕಿನ ಕೆಲವೆಡೆ ಸಂಜೆ ತುಂತುರು ಮಳೆಯಾಗಿದೆ.