
ಕಡಿರುದ್ಯಾವರದಲ್ಲಿ ಒಂಟಿ ಸಲಗ ಹಾವಳಿ
Tuesday, April 8, 2025
ಉಜಿರೆ: ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ಸೋಮವಾರ ರಾತ್ರಿ ಒಂಟಿ ಸಲಗ ಕಂಡುಬಂದಿದೆ.
ರಾಘವೇಂದ್ರ ಪಟವರ್ಧನ್ ಎಂಬವರ ತೋಟಕ್ಕೆ ನುಗ್ಗಿದ ಸಲಗ ಬಾಳೆ ಗಿಡಗಳನ್ನು ಧ್ವಂಸಗೈಯ್ಯುತ್ತಿದ್ದಾಗ ಮನೆಯವರ ಗಮನಕ್ಕೆ ಬಂದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅವರು ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ತೋಟದಿಂದ ಕಾಡಿಗೆ ಅಟ್ಟಿದ್ದಾರೆ ಕೆಲದಿನಗಳಿಂದ ಪರಿಸರದಲ್ಲಿ ಎರಡರಿಂದ ಮೂರು ಕಾಡಾನೆಗಳು ಇರುವ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.