ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ

ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ


ಕಾರ್ಕಳ: ಭಾರತವು ವಿವಿಧತೆಯಿಂದ ಕೂಡಿದ್ದು, ವಿವಿಧತೆಯಿಂದ ಎಕತೆಗೆ ಜೋಡಿಸುವ ಕೆಲಸವನ್ನು ದಾರ್ಮಿಕ ಕೇಂದ್ರಗಳು  ವೈವಿದ್ಯಮಯಗೊಳಿಸಿವೆ ಭಾರತದ ದಾರ್ಶನಿಕ ಹಾಗೂ ಪ್ರೇಕ್ಷಣಿಯ ಸ್ಥಳಗಳ ಉನ್ನತೀಕರಣಕ್ಕಾಗಿ ಹಾಗೂ ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿ, ಪ್ರವಾಸೋಧ್ಯವನ್ನು ಉನ್ನತಿಕರಿಸುವ ಉದ್ದೇಶದೊಂದಿಗೆ ಕಾರ್ಕಳಕ್ಕೆ ಕೇಂದ್ರ  ಪ್ರವಾಸೋಧ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ನೀಡಿ ಕಾರ್ಕಳದ ಐತಿಹಾಸಿಕ ಆನೆಕೆರೆ ಮತ್ತು ರಾಮಸಮುದ್ರ ವೀಕ್ಷಣೆ ನಡೆಸಿದರು.

ಕಾರ್ಕಳದ ಆನೆಕೆರೆ ಬಸದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕಾರ್ಕಳ ಆನೆಕೆರೆ, ಹಾಗೂ ವರಂಗ ಜೈನ ಬಸದಿಗಳ ಅಭಿವೃದ್ಧಿಗಾಗಿ ಸ್ವದೇಶಿ ದರ್ಶನ್ ಯೋಜನೆಯಡಿಯಲ್ಲಿ 116 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆಯಿತ್ತರು.

ಇತ್ತೀಚೆಗೆ ನಡೆದಂತಹ ಪ್ರವಾಸಿಗರ ಮೇಲೆ ರಾಕ್ಷಸಿ ಪ್ರವ್ರತ್ತಿಯ ಉಗ್ರರ ದಾಳಿಗೆ ನಾವು ಸೂಕ್ತವಾದ ಪ್ರತ್ಯುತ್ತರವನ್ನು ನೀಡುತ್ತೇವೆ ಭಾರತ ನಿನ್ನೆ ಸೂಕ್ತ ಹಾಗೂ ಕೆಚ್ಚೆದೆಯ  ಅತ್ಯುಗ್ರವಾದ ಉತ್ತರವನ್ನು ಪಾಕಿಸ್ಥಾನಕ್ಕೆ ನೀಡಿದೆ ಭಾರತದ ಸೇನೆ ಪಾಕಿಸ್ಥಾನದ ಉಗ್ರ ನೆಲೆಗಳನ್ನು ದ್ವಂಸಗೊಳಿಸಿದ್ದು ಭಾರತದ ಬದಲಾಗುತ್ತಿರುವ ಚಿತ್ರವಾಗಿದೆ ಒಂದೆಡೆ ಭಾರತ ಸಮರ್ಥ ಹಾಗೂ ಸಶಕ್ತವಾಗುತ್ತಿದೆ ಇದು ನಮ್ಮ ಶಕ್ತಿ ಹಾಗೂ ಅಭಿವ್ರದ್ದಿಯ ಸಂಕೇತವಾಗಿದೆ. ಭಾರತವನ್ನು ಸಾಂಸ್ಕ್ರತಿಕ ಸಮ್ರದ್ದಿಯಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಶಾಸಕ ವಿ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿದ್ಯಾಕುಮಾರಿ,  ಸಹಾಯಕ ಕಮೀಶನರ್ ರಶ್ಮಿ, ತಹಶಿಲ್ದಾರ್ ಪ್ರದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಬಿಜೆಪಿ ಹಿರಿಯ ಮುಖಂಡ ಎಂಕೆ  ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಆಂತೋನಿ ಡಿಸೋಜಾ ನಕ್ರೆ, ಆನೆಕೆರೆ ಕೆರೆ ಬಸದಿ ಜೀರ್ಣೋದ್ದಾರ ಸಮಿತಿ ಪ್ರಮುಖರಾದ ಉದ್ಯಮಿ ಮಹೇಂದ್ರವರ್ಮ ಜೈನ್, ಸಂಪತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಕುಮಾರ್ ಜೈನ್,  ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಮಹಾವೀರ್ ಜೈನ್  ಶಿರ್ಲಾಲು, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜೈನ ಸಮುದಾಯದ ಪ್ರಮುಖರಾದ ಎನ್ ಪ್ರಭಾತ್, ದೇವರಾಜ್ ಅಧಿಕಾರಿ, ಜಗದೀಶ್ ಹೆಗ್ಡೆ, ಮಾಜಿ ಪುರಸಭಾ ಸದಸ್ಯ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article