
ಹಿಂದೂ ಮುಖಂಡರುಗಳಾದ ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ!
ಮಂಗಳೂರು: ಹಿಂದೂ ಮುಖಂಡರಾದ ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲುಗೆ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಲಾಗಿದೆ.
ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್ ಎಂದು ಪೋಸ್ಟ್ ಮಾಡಲಾಗಿದ್ದು, ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್.. ಶರಣ್ ಹತ್ಯೆಯಾಗಲು ತಯಾರಾಗು’ ಎಂದು ಬೆದರಿಕೆ ಹಾಕಲಾಗಿದ್ದು, ಬಜರಂಗದಳ ಮುಖಂಡ ಭರತ್ ಕುಮ್ಡೆಲ್‌ಗೂ ಇದೇ ರೀತಿ ಬೆದರಿಕೆಯ ಪೋಸ್ಟ್ ಹಾಕಲಾಗಿದೆ.
ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಆರೋಪಿಯಾಗಿದ್ದ ಭರತ್ ಕುಮ್ಡೆಲ್ ಬಗ್ಗೆ ಜಾಲತಾಣದಲ್ಲಿ ‘ನೆಕ್ಸ್ಟ್ ಟಾರ್ಗೆಟ್ ಭರತ್ ಕುಮ್ಡೆಲ್.. ಇಂಷಾ ಅಲ್ಲಾ’ ಎಂದು ಪೋಸ್ಟ್ ಮಾಡಲಾಗಿದೆ. 2017 ಜೂನ್ 21ರಂದು ಹತ್ಯೆಯಾಗಿದ್ದ ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಆರೋಪ ಈತನ ಮೇಲಿದೆ ಭರತ್ ಕುಮ್ಡೇಲ್ ಬಗ್ಗೆ ಸಝಿನ್ ಹಾಗೂ ಸಜೊವ್ ಕಾಂಟ್ ಹೆಸರಿನ ಖಾತೆಗಳಿಂದ ಪೋಸ್ಟ್ ಮಾಡಲಾಗಿದೆ.
ಸುಹಾಸ್ ಹತ್ಯೆ ಬಳಿಕ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಈ ನಡುವೆಯೇ ದ್ವೇಷ ಕಾರುವ ಪೋಸ್ಟ್‌ಗಳ ಮೂಲಕ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ.
ಬಶೀರ್ ಕೊಲೆ ಆರೋಪಿಗೂ ಜೀವ ಬೆದರಿಕೆ:
2018 ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ ಬಶೀರ್ ಕೊಲೆ ಘಟನೆ ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ ನಡೆದಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜು ಈ ಕೊಲೆ ಪ್ರಕರಣದ ಆರ‍್ದೊ. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ‘ಶ್ರೀಜು ನೆಕ್ಸ್ಟ್ ಟಾರ್ಗೆಟ್’ ಎಂದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. Killers_target ಹೆಸರಿನ ಪೇಜ್‌ನಿಂದ ಪೋಸ್ಟ್ ಆಗಿತ್ತು. ಭಾನುವಾರ ಮತ್ತೆ ಕಿಡಿಗೇಡಿಗಳು ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದಾರೆ. Abu_Sifiyan678 ಪೇಜ್‌ನಿಂದ ಬೆದರಿಕೆ ಹಾಕಲಾಗಿದ್ದು, ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಎಂದು ಮಲಯಾಳಂನಲ್ಲಿ ಮೆಸೇಜ್ ಮಾಡಲಾಗಿದೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಜೋರಾಯ್ತು ಪ್ರತೀಕಾರದ ಕಿಚ್ಚು!:
ಜಾಲತಾಣಗಳಲ್ಲಿ ರಿವೆಂಜ್ ಪೋಸ್ಟ್‌ಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಹಿಂದೂ ಮುಖಂಡರ ಬಳಿಕ ಮುಸ್ಲಿಂ ನಾಯಕರಿಗೂ ಕೊಲೆ ಬೆದರಿಕೆ ಹಾಕಲಾಗಿದೆ.
ಹಿಂದು ಮುಖಂಡರಾದ ಶರಣ್ ಪಂಪ್‌ವೆಲ್, ಭರತ್ ಕುಡ್ಮೇಡ್ ಬಳಿಕ ಎಸ್‌ಡಿಪಿಐ ಮುಖಂಡರಿಗೂ ಸ್ಕೆಚ್ ಹಾಕಲಾಗಿದೆ. ರಿಯಾಜ್ ಫರಂಗಿಪೇಟೆ, ರಿಯಾಜ್ ಕಡಂಬು, ಶಾಫಿ ಬೆಳ್ಳಾರೆಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ನೆಕ್ಸ್ಟ್ ಹಿಟ್ ಲಿಸ್ಟ್ ಎಂದು ಪೋಸ್ಟ್ ಮಾಡಲಾಗಿದೆ. ಯೂಟ್ಯೂಬ್ ವಿಡಿಯೋ ಒಂದರಲ್ಲಿ ಕೊಲೆ ಬೆದರಿಕೆಯ ಪೋಸ್ಟ್ ಮಾಡಲಾಗಿದ್ದು, krrakesh9456 ಎಂಬ ಖಾತೆಯಿಂದ ಕಾಮೆಂಟ್ ಹಾಕಲಾಗಿದೆ. ಇದರಲ್ಲಿ ಬಹುತೇಕ ವಿದೇಶದಿಂದಲೇ ನಿಯಂತ್ರಿಸಲ್ಪಡುತ್ತಿರುವ ಫೇಕ್ ಅಕೌಂಟ್‌ಗಳಾಗಿವೆ ಎಂದು ಹೇಳಲಾಗಿದೆ.