ಅಸಹಾಯಕ ಹಿರಿ ಜೀವಗಳಿಗೆ ನೇತಾಜಿ ಬ್ರಿಗೇಡ್ ನಿಂದ ಸೂರು: ವಿಜೇಶ್ ಅಮೀನ್ ಸ್ಮರಣಾಥ೯ ಕೊಡುಗೆ

ಅಸಹಾಯಕ ಹಿರಿ ಜೀವಗಳಿಗೆ ನೇತಾಜಿ ಬ್ರಿಗೇಡ್ ನಿಂದ ಸೂರು: ವಿಜೇಶ್ ಅಮೀನ್ ಸ್ಮರಣಾಥ೯ ಕೊಡುಗೆ


ಮೂಡುಬಿದಿರೆ: ಜೋರಾಗಿ ಮಳೆ, ಗಾಳಿ ಬೀಸಿದರೆ ಇಂದೋ ನಾಳೆಯೋ ಬಿದ್ದು ಹೋಗಲಿರುವ ಮನೆಯಲ್ಲಿ ಹಿರಿ ಜೀವಗಳೆರಡು ಪ್ರಾಣ ಭಯದಿಂದ ಜೀವಿಸುತ್ತಿರುವುದನ್ನು ಮನಗಂಡಿರುವ ಮೂಡುಬಿದಿರೆಯ ನೇತಾಜಿ ಬ್ರಿಗೇಡ್(ರಿ) ಸಂಸ್ಥೆಯು ಸುಸಜ್ಜಿತವಾದ ಸೂರೊಂದನ್ನು ನಿಮಿ೯ಸಲು ಮುಂದಡಿಯಿಟ್ಟಿದೆ. 


ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲಂಗಲ್ಲು ನಿವಾಸಿಗಳಾದ ವೀರಪ್ಪ ಮೂಲ್ಯ-ಬೇಬಿ ಎಂಬ ಹಿರಿಯ ದಂಪತಿಗಳಿಬ್ಬರು ಕಳೆದ 30 ವಷ೯ಗಳಿಂದ ಕುಸಿದು ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. 


ಜಾಗವಿದ್ದರೂ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳು  ಈ ದಂಪತಿಯ ಹೆಸರಿನಲ್ಲಿ ಇಲ್ಲದೆ ಇದ್ದಿದ್ದರಿಂದ ಅದಕ್ಕೆ ಪಂಚಾಯತ್ ನಿಂದ ಸವಲತ್ತುಗಳನ್ನು ಒದಗಿಸಲು ಕಷ್ಟಸಾಧ್ಯವಾಗಿತ್ತು. 

ಆ ಹಿರಿಯರಿಗೆ ಮಕ್ಕಳೂ ಇಲ್ಲದೆ ಇರುವುದರಿಂದ ಆ ಅಸಹಾಯಕ ದಂಪತಿ ಮುರುಕಲು ಮನೆಯಲ್ಲೇ ಜೀವಿಸಬೇಕಾಗಿತ್ತು. 

ಮೂಡುಬಿದಿರೆಯಲ್ಲಿ ಸ್ವಚ್ಛತೆಗೆ ಹೆಸರಾಗಿರುವ, ಕಂಬಳ ಸಹಿತ ವಿವಿಧ ಜಾತ್ರಾ ಮಹೋತ್ಸವಗಳಲ್ಲಿ ವೇಷ ಹಾಕಿ ಅದರಲ್ಲಿ ಒಟ್ಟಾದ ಹಣದಲ್ಲಿ ಅಸಹಾಯಕರಿಗೆ ವೈದ್ಯಕೀಯ ವೆಚ್ಚಕ್ಕೆ ನೆರವು ಮುಂತಾದ ಸೇವಾ ಕಾಯ೯ ಚಟುವಟಿಕೆಯನ್ನು ಮಾಡುತ್ತಾ ಬಂದಿರುವ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಇದೀಗ ಹಿರಿಯ ಜೀವಗಳಿಗೆ ಸೂರೊಂದನ್ನು ನಿಮಿ೯ಸಲು ಹೊರಡುವ ಮೂಲಕ ಅವರ ಕಣ್ಣೀರನ್ನು ಒರೆಸಲು ಮುಂದಾಗಿದೆ.

ಮುಖ್ಯ ರಸ್ತೆಯಿಂದ ದೂರದಲ್ಲಿರುವ ಆ ಮನೆಗೆ ವಾಹನಗಳು ಹೋಗಲು ಸರಿಯಾದ ದಾರಿ ಇಲ್ಲದಿದ್ದುದರಿಂದ  ಭಾನುವಾರದಂದು ರಸ್ತೆಯ ಬದಿಯಲ್ಲಿದ್ದ ಗಿಡ ಗಂಟಿಗಳನ್ನು, ಕಲ್ಲು ತೆಗೆಯುವ ಮೂಲಕ ಕೆಲಸವನ್ನು ಆರಂಭಿಸಿದೆ. ಮುಂದಿನ ವಾರದಲ್ಲಿ ಗುದ್ದಲಿ ಪೂಜೆ ನಡೆಸಿ ಮನೆ ನಿಮಿ೯ಸುವ ಯೋಜನೆಯನ್ನು ರೂಪಿಸಿದೆ.

ವಿಜೇಶ್ ಅಮೀನ್ ಸ್ಮರಣಾಥ೯ ಸೂರು: 

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿರುವ ನೇತಾಜಿ ಬ್ರಿಗೇಡ್ ನ ಟ್ರಸ್ಟಿ ವಿಜೇಶ್ ಅಮೀನ್ ಅವರ ಸ್ಮರಣಾಥ೯  ಅಸಹಾಯಕ ಹಿರಿಯ ಜೀವಗಳಿಗೆ ಮನೆಯನ್ನು ನಿಮಿ೯ಸಲು ಹೊರಟಿದ್ದೇವೆ.

ವಾಡಿ೯ನ ದಿನೇಶ್ ಅವರು ಆರು ತಿಂಗಳ ಹಿಂದೆ ಈ ಮನೆಯ ಪರಿಸ್ಥಿತಿಯನ್ನು ತಮ್ಮ ಗಮನಕ್ಕೆ ತಂದು ಮನವಿಯನ್ನು ನೀಡಿದ್ದರು. ಮನೆ ನಿಮಿ೯ಸಿ ಕೊಡುವಷ್ಟು ಸಂಘಟನೆಯು ಆಥಿ೯ಕವಾಗಿ ಬೆಳೆದಿಲ್ಲ ಆದರೂ ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ  ಮನೆ ನಿಮಿ೯ಸಲು ಮುಂದಾಗಿದ್ದೇವೆ ಎನ್ನುತ್ತಾರೆ ನೇತಾಜಿ ಬ್ರಿಗೇಡ್ ನ  ರಾಹುಲ್ ಕುಲಾಲ್

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article