
ಸಂತ ಫಿಲೋಮಿನಾ ಕಾಲೇಜಿನ ಸಿಬ್ಬಂದಿಗಳ ಒಂದು ದಿನದ ಪ್ರವಾಸ
Monday, May 5, 2025
ಪುತ್ತೂರು: ಬಿಡುವಿಲ್ಲದ ಜೀವನ ಶೈಲಿಗೆ ವಿರಾಮವನ್ನು ನೀಡಲು ಸಂತ ಫಿಲೋಮಿನಾ ಕಾಲೇಜಿ(ಸ್ವಾಯತ್ತ)ನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋರವರ ನೇತೃತ್ವದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ 45 ಜನರ ತಂಡವು ಬ್ರಹ್ಮಾವರದ ರಿಲ್ಯಾಕ್ಸ್ ಲೀಶರ್ ಪಾರ್ಕ್‌ಗೆ ಏ.30 ರಂದು ಪ್ರವಾಸವನ್ನು ಕೈಗೊಂಡರು.
ಪ್ರಕೃತಿಯ ಮಡಿಲಿನಲ್ಲಿ ಆಯೋಜಿಸಿದ ಈ ಪ್ರವಾಸವು ಸಿಬ್ಬಂದಿಗಳಲ್ಲಿ ನವೋಲ್ಲಾಸ ಮೂಡಿಸಿತು. ಪಿಕ್ನಿಕ್ ಅನ್ನು ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಸಂಯೋಜಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಧನ್ಯ ಪಿ.ಟಿ. ಹಾಗೂ ಕಛೇರಿ ಅಧೀಕ್ಷಕಿ ರುಫೀನಾ ಡಿ’ಸೋಜಾ ಸಹಕಾರ ನೀಡಿದರು.