
ಕೃಷಿ ವಿಜ್ಞಾನಿ ಸತ್ಯನಾರಾಯಣ ಬೆಳ್ಳಾರಿ ಅವರೊಂದಿಗೆ ಪ್ರಥಮ ಬಿ.ಜೆಡ್.ಸಿ ವಿದ್ಯಾರ್ಥಿನಿಯರ ಸಂದರ್ಶನ
Monday, May 5, 2025
ಪುತ್ತೂರು: ಮೇ 1 ರಂದು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿ(ಸ್ವಾಯತ್ತ)ನ ಪ್ರಥಮ ಬಿ.ಜೆಡ್.ಸಿ ವಿಭಾಗದ ಮೂರು ವಿದ್ಯಾರ್ಥಿನಿಯರಾದ ದೀಕ್ಷಿತಾ ಕೆ.ಎಸ್., ಗ್ರೀಷ್ಮಾ ಮತ್ತು ದಿಶಾ ಅವರು, ಸ್ಥಿರ ಕೃಷಿ ಮತ್ತು ಬೆಳೆ ವೈವಿಧ್ಯತೆಯ ಮೇಲಿರುವ ತಮ್ಮ ಆಸಕ್ತಿಯಿಂದ ಪ್ರಸಿದ್ಧ ಕೃಷಿ ವಿಜ್ಞಾನಿ ಸತ್ಯನಾರಾಯಣ ಬೆಳ್ಳಾರಿ ಅವರನ್ನು ಭೇಟಿ ಮಾಡಿ ಸಂದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಅವರು 650ಕ್ಕೂ ಹೆಚ್ಚು ಭತ್ತ, ತರಕಾರಿ ಮತ್ತು ಹಣ್ಣಿನ ತಳಿಗಳನ್ನು ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ವಿಜ್ಞಾನಿಯೊಂದಿಗೆ ಅರ್ಥಪೂರ್ಣವಾದ ಸಂದರ್ಶನ ನಡೆಸಿದರು. ಈ ಮೂಲಕ ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಮಹತ್ವಪೂರ್ಣ ಜ್ಞಾನವನ್ನು ಪಡೆದುಕೊಂಡರು.