
44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2025: ಶಿಕ್ಷಕಿ ಸೌಮ್ಯ ಕೆ. ದಾಖಲೆ
Saturday, May 3, 2025
ಉಜಿರೆ: ಕಳೆದ ಏ.21 ರಿಂದ 23 ರವರೆಗೆ ಮೈಸೂರು ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಜರುಗಿದ 44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2025ರಲ್ಲಿ ಕಾಶಿಪಟ್ನ ಸರಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯ ಕೆ. ಅವರು ಭಾಗವಹಿಸಿ ಹಲವು ವಿಭಾಗಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ಪಂದ್ಯಾಟದ 40 ರಿಂದ 45 ವರ್ಷ ವಯೋಮಾನದವರ ಸ್ಪರ್ಧೆಯ 200ಮೀ ಹರ್ಡಲ್ಸ್‌ನಲ್ಲಿ ಪ್ರಥಮ, ಉದ್ದಜಿಗಿತದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವೀತಿಯ, 200 ಮೀ ಓಟದಲ್ಲಿ ದ್ವೀತಿಯ, 4X400 ರಿಲೇ ಪ್ರಥಮ, 4X100 ರಿಲೇಯಲ್ಲಿ ಪ್ರಥಮ, 4X100 ಮಿಕ್ಸೆಡ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಅಪೂರ್ವ ಕ್ರೀಡಾ ಸಾಧನೆ ಮೆರೆದಿದ್ದಾರೆ.
ಅವರ ಈ ಸ್ಪೂರ್ತಿದಾಯಕ ಭಾಗವಹಿಸುವಿಕೆ ಕ್ರೀಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಬಂಗಾಡಿ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಅವರ ಪುತ್ರಿ.