
ಹೂಳು ತುಂಬಿದ ರಸ್ತೆ: ಶ್ರಮದಾನದ ಮೂಲಕ ತೆರವು
Monday, June 30, 2025
ಅಡ್ಡೂರು: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ವತಿಯಿಂದ ಇಲ್ಲಿನ ಕೆಳಗಿನಕೆರೆಯಿಂದ ಗೇಟ್ ಹೌಸ್ ವರೆಗಿನ ರಸ್ತೆಯಲ್ಲಿ ತುಂಬಿದ್ದ ಹೂಳನ್ನು ಶ್ರಮದಾನದ ಮೂಲಕ ರವಿವಾರ ತೆರವುಗೊಳಿಸಲಾಯಿತು.
ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿದು ಎರಡು ಬದಿಯಲ್ಲಿ ಮಣ್ಣು ತುಂಬಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್.ಸಿ.ಕೆ. ಸದಸ್ಯರು ಹೂಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಈ ಸಂದರ್ಭ ಎಫ್.ಸಿ.ಕೆ. ಅಧ್ಯಕ್ಷ ಹಂಝ, ಮುಖಂಡರಾದ ಜಬ್ಬಾರ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಉಸ್ಮಾನ್, ಹಾರೀಸ್, ಸದ್ದೀಕ್, ಸಮೀರ್, ನೌಫಲ್, ಮುಸ್ತಫಾ ಅದ್ಯಪ್ಪಾಡಿ, ಹರ್ಷಾದ್, ಆಶೀಕ್, ಅನ್ಸಾರ್, ಹಫೀಝ್ ಮತ್ತಿತರರು ಉಪಸ್ಥಿತರಿದ್ದರು.