ವ್ಯಾಪಾರಿಗಳ ವಿರುದ್ಧ ‘ಗರುಡ’ ಕಾರ್ಯಾಚರಣೆ

ವ್ಯಾಪಾರಿಗಳ ವಿರುದ್ಧ ‘ಗರುಡ’ ಕಾರ್ಯಾಚರಣೆ


ಬಂಟ್ವಾಳ: ಬಿ.ಸಿ.ರೋಡಿನ ಬಸ್ ತಂಗುದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ದ ಮುಂಭಾಗ ಸಾರ್ವಜನಿಕರಿಗೆ ನಡೆದಾಡಲು ಅಡಚಣೆ ಉಂಟು ಮಾಡುವ ವ್ಯಾಪಾರಿಗಳ ಸಾಮಾಗ್ರಿಗಳನ್ನು ಪುರಸಭೆ ಶುಕ್ರವಾರ  ತೆರವುಗೊಳಿಸಿ ಎಚ್ಚರಿಕೆ ನೀಡಿದ್ದು,ಇದೀಗ ಮತ್ತೊಮ್ಮೆ ಪುರಸಭೆಯ "ಗರುಡ" ರಸ್ತೆಗಿಳಿದಿದೆ.

ಮುಖ್ಯಾಧಿಕಾರಿ ನಝೀರ್ ಆಹಮ್ಮದ್ ಹಾಗೂ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್  ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಈ ತೆರವು ಕಾರ್ಯಾಚರಣೆ ನಡೆಸಿದರು.

ಪುರಸಭೆಯ ಎಚ್ಚರಿಕೆಯ ಬಳಿಕವು ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದ ಅಂಗಡಿ ಮುಂಭಾಗ ತಮ್ಮ ಸಾಮಾಗ್ರಿಗಳನ್ನಿರಿಸಿ ಸಾರ್ವಜನಿಕರು ನಡೆದಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಬಸ್ ತಂಗುದಾಣದಲ್ಲಿರುವ ಅಂಗಡಿಗಳ  ಸಾಮಾಗ್ರಿಗಳು ಸಾರ್ವಜನಿಕರು ನಡೆದಾಡುವ ಜಗಲಿಯನ್ನೇ ಪೂರ್ತಿ ಅವರಿಸಿದ್ದರಿಂದ ಮಳೆಗಾಲದಲ್ಲಿ ಪ್ರಯಾಣಿಕರು ಜಗಲಿ ಬಿಟ್ಟು ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಈ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲ್ಲೆಯಲ್ಲಿ ಪುರಸಭೆ ತೆರವು ಕಾರ್ಯಾಚರಣೆ ನಡೆಸಿದೆ.

ಬಿ.ಸಿ.ರೋಡಿನ ಬಸ್ ತಂಗುದಾಣ ಮಾತ್ರವಲ್ಲ ಪುಟ್ ಪಾತ್ ಇಲ್ಲದ ಬಂಟ್ವಾಳ ಸಹಿತ ಬಿ.ಸಿ. ರೋಡಿನ ಬಹುತೇಕ ಕಡೆ ಸಾರ್ವಜನಿಕರ ನಡೆದಾಡಲು ಅಡಚಣೆಯಾಗುವಂತೆ ಅಂಗಡಿ ಸಾಮಾಗ್ರಿಗಳನ್ನು ಮುಂಭಾಗದಲ್ಲೇ ಇರಿಸಲಾಗುತ್ತಿದೆ.

ಪುರಸಭೆ ಗರುಡ ಕಾರ್ಯಾಚರಣೆಯ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾಮಾಗ್ರಿಗಳನ್ನು ಇರಿಸಿದರೆ ತೆರವುಗೊಳಿಸುವ ಎಚ್ಚರಿಕೆಯನ್ನು ಪುರಸಭೆ ನೀಡಿತ್ತು.ಅಧಿಕಾರಿಗಳು ಪುರುಸೊತ್ತಾದಾಗ ದೂರು ಬಂದಲ್ಲಿ ಕಾರ್ಯಾಚರಣೆಗೆ ಇಳಿಯುತ್ತಾರೆ. ಉಳಿದದಿನಗಳಲ್ಲಿ ಇದರ ಹತ್ತಿರ ಸುಳಿಯುತ್ತಿಲ್ಲ ಎಂಬ ಆರೋಪವು ಸಾರ್ವಜನಿಕರಿಂದ ಕೇಳಿ ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article