
ಸಾಧಕ ಈಜುಪಟುವಿಗೆ ಸನ್ಮಾನ
Monday, June 2, 2025
ಮಂಗಳೂರು: ಇಂಡಿಯಾ ಯೂಥ್‌ಗೇಮ್ಸ್‌ನಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕ, ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಸೀನಿಯರ್ ಈಜು ಸ್ಪರ್ಧಾಕೂಟದಲ್ಲಿ 2 ಚಿನ್ನ ಮತ್ತು 1 ಕಂಚು ಪದಕ ಗಳಿಸಿದ ಮಂಗಳೂರಿನ ಚಿಂತನ್ ಎಸ್. ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಡಾ. ಮೋಹನ್ ಆಳ್ವ ನಗದು ಬಹುಮಾನ ನೀಡಿ ಗೌರವಿಸಿದರು. ಅಸೋಸಿಯೇಶನ್‌ನ ಕಾರ್ಯದರ್ಶಿ ಮಹೇಶ್‌ಕುಮಾರ್, ಜೆ. ಯೋಗೀಶ್ ಭಟ್, ಚಿಂತನ್ ಶೆಟ್ಟಿಯವರ ಪೋಷಕರಾದ ಶಶಿಧರ್ ಶೆಟ್ಟಿ ಮತ್ತು ಹರಿಣಾಕ್ಷಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.