
ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಅಮಾಯಕ ಹಿಂದೂ ಮುಖಂಡರ ಮೇಲೆ ಎಫ್‌ಐಆರ್ ಮಾಡಿರುವುದು ಖಂಡನೀಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಮ್ಮೆಲ್ಲರ ಮಾರ್ಗದರ್ಶಕರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ದಿ. ಸುಹಾಸ್ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ದಕ್ಷಿಣ ಕನ್ನಡ ಬಿಜೆಪಿ ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಮತ್ತು ಜನಪ್ರತಿನಿಧಿಗಳ ಮೇಲೆ ನಿರಂತರವಾಗಿ ಸುಳ್ಳು ಹಾಗೂ ಗ್ರಾಹ್ಯವಲ್ಲದ ದೂರುಗಳನ್ನು ದಾಖಲಿಸಿ, ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆಯಂತೆ ಮಾಡಿರುವ ಈ ಕಾಂಗ್ರೇಸ್ ಸರಕಾರ ಅರ್ಧರಾತ್ರಿ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆಯಲ್ಲಿರುವ ಸಂದರ್ಭದಲ್ಲಿಯೇ ಮನೆಗೆ ನುಗ್ಗಿ ಹಿಂದೂ ಕಾರ್ಯಕರ್ತರನ್ನು ಹೆದರಿಸುವ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇದು ಸರ್ಕಾರದ ಅಮಾನವೀಯ ನಡವಳಿಕೆಯಾಗಿದ್ದು, ಪೊಲೀಸರ ಮೂಲಕ ಅಧಿಕಾರದ ದುರುಪಯೋಗ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಹಿಂದೂಗಳ ಪರ ಮಾತನಾಡುವವರನ್ನು ಪೊಲೀಸರ ಮುಖೇನ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಹಿಂದೂಗಳ ಧ್ವನಿಯನ್ನು ಅಡಗಿಸುವ ಮೂಲಕ ಮುಸ್ಲಿಮರ ಒಲೈಕೆ ರಾಜಕಾರಣ ಮಾಡುತ್ತಿದೆ. ಅಷ್ಟೇ ಅಲ್ಲ ಈ ಹಿಂದೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಹೆಸರಿನಲ್ಲಿ ಬಾಂಗ್ಲಾ ದೇಶದಂತೆ ಗಲಭೆ ಮಾಡುತ್ತೇವೆ ಎಂದು ಭಾಷಣ ಮಾಡಿದ್ದರ ಪರಿಣಾಮ ಆ ಕೂಡಲೆ ಜಿಲ್ಲೆಯಲ್ಲಿ ಪ್ರಕ್ಷಬ್ದ ಪರಿಸ್ಥಿತಿ ಉಂಟಾಗಿ ಕಲ್ಲುತೂರಾಟ, ಬೆಂಕಿ ಹಚ್ಚುವ ಕೆಲಸ ನಡೆದಿದ್ದರೂ ಅವರನ್ನು ರಕ್ಷಸಿಕೊಂಡು ಬರುತ್ತಿದೆ ಈ ಕಾಂಗ್ರೆಸ್ ಸರಕಾರ. ಇದರ ಬಗ್ಗೆ ಪ್ರಶ್ನಿಸಿದಾಗ ಕಾನೂನು ಅಭಿಪ್ರಾಯಕ್ಕೆ ಕಳುಹಿಸಿದ್ದೇವೆ ಎಂಬ ಸುಳ್ಳು ಸಬೂಬು ನೀಡುತ್ತಾ ಬಂದಿರುತ್ತಾರೆ. ಎಷ್ಟೊಂದು ಸಮಯ ಕಳೆದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ ಅವರುಗಳೆಲ್ಲಾ ರಾಜಾರೋಷವಾಗಿ ತಿರುಗಾಡುತ್ತಿರುವುದನ್ನು ನೋಡಿದರೆ ಸರಕಾರವೇ ಗೂಂಡಾವರ್ತನೆಯನ್ನು ಪೋಷಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಸರಕಾರದ ಈ ವರ್ತನೆಗೆ ನಮ್ಮ ಧಿಕ್ಕಾರವಿದೆ.
ಜಿಲ್ಲೆಯಲ್ಲಿ ಆಕ್ರಮ ಮರಳುಗಾರಿಕೆ, ಡ್ರಗ್ಸ್ ಮಾಫಿಯಾ ಇನ್ನಿತ್ತರ ಆಕ್ರಮ ದಂದೆಗಳನ್ನು ನಿಲ್ಲಿಸಬೇಕು. ಜಿಲ್ಲೆಯ ಶಾಂತಿಯುತ ಪರಿಸರವನ್ನು ಕಾಪಾಡಲು, ಇಂತಹ ರಾಜಕೀಯ ಪ್ರೇರಿತ ಪೊಲೀಸ್ ಅಕ್ರಮಗಳು ತಕ್ಷಣವೇ ನಿಲ್ಲಬೇಕು. ಹಾಗೂ ಹಿಂದೂ ಮುಖಂಡರ ಮೇಲೆ ಮಾಡಿರುವ ಸುಳ್ಳು ಹಾಗೂ ದುರುದ್ದೇಶಪೂರ್ವಕ ದೂರುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ಆಗ್ರಹಿದೆ.