
ದರೋಡೆ, ಕಳ್ಳತನ: ಮುಂಜಾಗ್ರತೆಗೆ ಸೂಚನೆ
Saturday, June 28, 2025
ಮಂಗಳೂರು: ಮಳೆಗಾಲದಲ್ಲಿ ದರೋಡೆ, ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಮುಜಾಗ್ರತೆ ವಹಿಸುವಂತೆ ಪೋಲೀಸ್ ಇಲಾಖೆ ನಾಗರಿಕರಿಗೆ ಜಾಲತಾಣಗಳ ಮೂಲಕ ಸೂಚನೆ ನೀಡಿದೆ.
ದರೋಡೆ ನಡೆಸುವ ಉತ್ತರ ಭಾರತದ ಚಡ್ಡಿ ಗ್ಯಾಂಗ್ ಮಳೆಗಾಲದ ಪ್ರಾರಂಭದಲ್ಲಿ ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಚಟುವಟಿಕೆಯಲ್ಲಿದೆ. ಮಂಗಳೂರು ಅಸುಪಾಸಿನ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಕಳೆದ ಒಂದು ವಾರದಿಂದ ಸರಣಿ ಕಳ್ಳತನ ನಡೆಯುತ್ತಿದೆ.
ಈ ಗ್ಯಾಂಗ್ ಮಂಗಳೂರು ನಗರಕ್ಕೂ ಬರುವ ಸಾಧ್ಯತೆ ಇರುವುದರಿಂದ ಒಂಟಿ ಮನೆಗಳು, ಬೀದಿಯ ಕೊನೆಯ ಮನೆಗಳು ಹಾಗೂ ಎಲ್ಲ ನಾಗರಿಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಯಾವುದೇ ಅಪರಿಚಿತ ವ್ಯಕ್ತಿಗಳು ನಿಮ್ಮ ಮನೆ ಅಥವಾ ಬೀದಿಗಳಲ್ಲಿ ಸಂಚರಿಸುವ ಮಾಹಿತಿಗಳು ಇದ್ದರೆ ವಿಳಂಬವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಬೇಕು. ERS-112 ಅಥವಾ ಉರ್ವ ಪೊಲೀಸ್ ಠಾಣೆ 08242220521 ಗೆ ಕರೆ ಮಾಡಬಹುದು ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.