
ಕೊಂಕಣ ರೈಲು ಹೆಚ್ಚುವರ ಬೋಗಿ ಆಳವಡಿಕೆ
ಮಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆಗಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ರೈಲು ಸಂಖ್ಯೆ 16595, 16596 ಕೆಎಸ್‌ಆರ್ ಬೆಂಗಳೂರು - ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಜೂನ್ 11ರಿಂದ ನವೆಂಬರ್ 1ರ ತನಕ ಹೆಚ್ಚುವರಿಯಾಗಿ 1 ಸ್ಲೀಪರ್ ಬೋಗಿ, ಎರಡು ಜನರಲ್ ಬೋಗಿ, 3 ಟಯರ್ ಎಸಿ ಇಕಾನಮಿಯ ಎರಡು ಬೋಗಿ ಅಳವಡಿಸಲಾಗುತ್ತಿದ್ದು, ಒಟ್ಟು ಬೋಗಿಗಳ ಸಂಖ್ಯೆ 14 ರಿಂದ 19ಕ್ಕೇರಲಿದೆ.
ರೈಲು ಸಂಖ್ಯೆ 01595, 01596 ಕಾರವಾರ - ಮಡಗಾಂವ್ ಜಂಕ್ಷನ್ ರೈಲು ಜೂನ್ 12 ರಿಂದ ನವೆಂಬರ್ 2 ರ ತನಕ 14 ಬೋಗಿಗಳ ಬದಲು 19 ಬೋಗಿಗಳೊಂದಿಗೆ ಸಂಚರಿಸಲಿದೆ. ರೈಲುಗಳ ಆಗಮನ, ನಿರ್ಗಮನ, ನಿಲುಗಡೆ ತಾಣಗಳ ಮಾಹಿತಿಗಾಗಿ https://www.indianrail.gov.in/enquiry/SCHEDULE/TrainSchedule.html ಅಥವಾ ಐಆರ್ಸಿಟಿಸಿ ರೈಲ್ವೆ ಕನೆಕ್ಟ್ (IRCTC Rail Connect) ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಇತ್ತೀಚೆಗಷ್ಟೇ ಮಂಗಳೂರು ಸೆಂಟ್ರಲ್ - ವಿಜಯಪುರ ವಿಶೇಷ ರೈಲಿನ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು. ಇದು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆಯು ತಿಳಿಸಿದೆ. ಮಂಗಳೂರು ಸೆಂಟ್ರಲ್- ವಿಜಯಪುರ ರೈಲು (ಸಂಖ್ಯೆ-07378) ಪ್ರಸ್ತುತ ಮಧ್ಯಾಹ್ನ 2.35ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುತ್ತಿದ್ದು, ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರವನ್ನು ತಲುಪುತ್ತಿದೆ. ಜುಲೈ 1ರಿಂದ ಇದು ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದೆ. ಹಾಗೂ ಮರುದಿನ ಬೆಳಗ್ಗೆ 11.15ಕ್ಕೆ ವಿಜಯಪುರ ತಲುಪಲಿದೆ.