
ಸಂತ ಫಿಲೋಮಿನಾದಲ್ಲಿ ‘ಯೋಗಸಂಗಮ’
Saturday, June 21, 2025
ಪುತ್ತೂರು: ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯವನ್ನು ಆಧರಿಸಿ ಸಂತಫಿಲೋಮಿನಾ ಶಿಕ್ಷಣ ಸಂಸ್ಥೆಯ ಅಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ-ಯೋಗಸಂಭ್ರಮ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಯ್‌ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ.ಲಾರೆನ್ಸ್ ಮಸ್ಕರೇನ್ಹಸ್ ಅವರು ಯೋಗ ದಿನಾಚರಣೆಗೆ ಚಾಲನೆಯನ್ನು ನೀಡಿ, ನಮ್ಮ ಜೀವನ ದೇವರ ದೊಡ್ಡ ಕೊಡುಗೆ. ಬದುಕು ಸಾರ್ಥಕವಾಗಬೇಕಾದರೆ ಯೋಗ ಅತ್ಯಗತ್ಯ. ಸಂತೋಷ ನಮ್ಮ ಹೃದಯ ಮತ್ತು ಆತ್ಮದಲ್ಲಿ ಇರಲು ಸಹಾಯ ಮಾಡುವುದೇ ಪ್ರಾರ್ಥನೆ ಮತ್ತು ಯೋಗ. ಒಳ್ಳೆಯ ಸಂಬಂಧವನ್ನು ನಾವು ಪರರಲ್ಲಿಯೂ ಇಟ್ಟುಕೊಳ್ಳಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಅದರ ಜೊತೆಗೆ ಒಡನಾಟವಿರಬೇಕು ಎಂದರು.
ಸಂತ ಫಿಲೋಮಿನಾ ಸ್ವಾಯತ್ತ ಪದವಿ ಕಾಲೇಜು ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ದೇಹ, ಆತ್ಮ ಮತ್ತು ಮನಸ್ಸುಗಳ ಆರೋಗ್ಯವುಳ್ಳವನು ಸದೃಢನಾಗಿರುತ್ತಾನೆ. ಪ್ರಸ್ತುತ ದಿನಗಳಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮನೋ ಮಾಲಿನ್ಯ. ಈ ವಿಷಯದಲ್ಲಿ ಯೋಗವು ದೇಹ ಆತ್ಮ ಮತ್ತು ಮನಸ್ಸುಗಳನ್ನು ಶುದ್ದಿಗೊಳಿಸುತ್ತದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ.ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯ ಗುರುಗಳಾದ ವಂ.ಮಾಕ್ಸಿಂ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್.ಸಿ.ಸಿ. ನೇವಲ್ ವಿಂಗ್ ಅಧಿಕಾರಿ ಕ್ಲೆಮೆಂಟ್ ಪಿಂಟೋ ಸ್ವಾಗತಿಸಿದರು. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಚಂದ್ರಶೇಖರ್ ಕೆ. ವಂದಿಸಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ನೇವಿ ವಿಂಗ್ ಅಧಿಕಾರಿ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂತ ಫಿಲೋಮಿನಾ ಕಾಲೇಜು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪುಷ್ಪಾ ಎನ್ ಭಾಗವಹಿಸಿದ್ದರು.