ಹಾಸನ ಸರಣಿ ಹೃದಯಾಘಾತ: ವರದಿಗೆ ಸಚಿವ ದಿನೇಶ್ ಗುಂಡೂರಾವ್ ಆದೇಶ

ಹಾಸನ ಸರಣಿ ಹೃದಯಾಘಾತ: ವರದಿಗೆ ಸಚಿವ ದಿನೇಶ್ ಗುಂಡೂರಾವ್ ಆದೇಶ


ಮಂಗಳೂರು: ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತಗಳಾಗುತ್ತಿದೆ, ಹಾಸನದಲ್ಲೇ ಯಾಕೆ ಇಷ್ಟು ಹೃದಯಾಘಾತ ಸಂಭವಿಸುತ್ತಿದೆ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧ್ಯಯನ ನಡೆಸಿ ವರದಿ ನೀಡಲು ಆದೇಶಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಸತ್ಯಾ ಸತ್ಯತೆ ಏನೆಂಬುದು ವರದಿಯಿಂದ ತಿಳಿಯಲಿದೆ. ಈಗಿನ ಜೀವನ ಶೈಲಿ ಆಹಾರ ಪದ್ದತಿ, ಮೊಬೈಲ್ ಮತ್ತು ಡಿಜಿಟಲ್ ವ್ಯಸನದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಅನೇಕಇಗೆ ಚಿಕ್ಕ ವಯಸ್ಸಿನಲ್ಲಿ ರಕ್ತದೋತ್ತಡ, ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಈಗ ಎಲ್ಲಡೆ ಮಾಲಿನ್ಯವಿದೆ ವಾಯು, ಆಹಾರ, ನೀರಿನಲ್ಲಿ ಮಾಲಿನ್ಯ ಇದೆ. ದೆಹಲಿಯ ಗಾಳಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜೀವನ ಶೈಲಿ ನೋಡಿಕೊಳ್ಳೋದು ಅತೀ ಮುಖ್ಯವಾಗಿದೆ ಎಂದರು.

ಕೋವಿಡ್ ಬಳಿಕ ಹೃದಯಘಾತ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೋವಿಡ್‌ನಿಂದ ಏನಾದರೂ ಸಮಸ್ಯೆಯಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಯುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ ವಿಶ್ವಮಟ್ಟದ ಅಧ್ಯಯನದ ಅವಶ್ಯಕತೆಯಿದೆ ಕೋವಿಡ್ ದುಷ್ಪರಿಣಾಮ ಬಗ್ಗೆ ಬಹಳಷ್ಟು ಸಂಶೋಧನೆಯಾಗಬೇಕಿದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article