
ಅಪ್ರಾಪ್ತೆಯನ್ನು ಸೋಮೇಶ್ವರ ಬೀಚ್‌ಗೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ: ಬಂಧನ
ಉಳ್ಳಾಲ: ಇನ್ಸ್ಟಾಗ್ರಾಮ್‌ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡ ಕಿರಾತಕನೋರ್ವ ಆಕೆಯನ್ನು ಪ್ರೀತಿಸುವುದಾಗಿ ಯಾಮಾರಿಸಿ ಸೋಮೇಶ್ವರ ಬೀಚ್ ಬಳಿ ಕರೆದೊಯ್ದು ಕಾರಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಅಪ್ರಾಪ್ತೆ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಗರದ ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಎಂಬವನೇ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಆತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕೆಲ್ವಿನ್ ತನ್ನದೇ ಸಮುದಾಯದ ಕೇರಳ ತಲಪಾಡಿ ಗಡಿಭಾಗದ ನಿವಾಸಿ ಅಪ್ರಾಪ್ತೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಚಾಟಿಂಗಲ್ಲೇ ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿದ್ದ. ಫೋನ್ ಕರೆ ಮೂಲಕ ಸಂಪರ್ಕಿಸಿ ಕಳೆದ ಗುರುವಾರ ಆರೋಪಿ ಆಕೆಯನ್ನು ಆಕೆಯ ಮನೆ ಬಳಿಯೇ ಭೇಟಿ ಮಾಡಿ ಆಮಿಷ ಒಡ್ಡಿ ತನ್ನ ಕಾರಲ್ಲಿ ಆಕೆಯನ್ನು ಸೋಮೇಶ್ವರ ಬೀಚ್‌ಗೆ ಕರೆದೊಯ್ದಿದ್ದ. ಈ ವೇಳೆ ನಾನು ವಿರೋಧ ವ್ಯಕ್ತಪಡಿಸಿದರೂ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.