
ಮುಕ್ತ ಜೂಡೋ ಪಂದ್ಯಾಟದಲ್ಲಿ ಪದಕ
Monday, July 28, 2025
ಬಂಟ್ವಾಳ: ಕರ್ನಾಟಕ ಅಮೆಚೂರು ಜೂಡೋ ಅಸೋಸಿಯೇಷನ್ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಅಮೆಚೂರು ಜೂಡೋ ಅಸೋಷಿಯೇಷನ್ ಸಹಯೋಗದಲ್ಲಿ ಬಾಲಕ, ಬಾಲಕಿಯರಿಗಾಗಿ ನಡೆದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಜೂಡೋ ಪಂದ್ಯಾಟದಲ್ಲಿ ಯಶ್ವಿನಿ ಬೆಳ್ಳಿ ಪದಕ ಹಾಗೂ ಹಂಸಿಕಾ ಕಂಚಿನ ಪದಕವನ್ನು ಗೆದ್ದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಜುಲೈ 25 ರಿಂದ 27ರವರೆಗೆ ಜೂಡೋ ಪಂಟ್ಯಾಟ ನಡೆದಿದ್ದು, ಬಹುಮಾನ ವಿಜೇತ ಇಬ್ಬರೂ ವಿದ್ಯಾರ್ಥಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ತರಬೇತಿ ನೀಡಿದ್ದಾರೆ.