
ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ಸಮರ್ಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆ: ಮಂಜುಳಾ ಗೌಡ
ಬಂಟ್ವಾಳ: ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆಯಾಗಿದೆ ಎಂದು ಸನಾತನ ಸಂಸ್ಥೆಯ ಮಂಜುಳ ಗೌಡ ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದಗುರುವಾರ ಸಂಜೆ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಗುರು-ಶಿಷ್ಯ ಪರಂಪರೆ ಭಾರತದ ಒಂದು ವೈಶಿಷ್ಟವಾಗಿದೆ. ಪರಮ ಕಲ್ಯಾಣಕಾರಿ ಗುರುತತ್ವವು ಸನಾತನ ಧರ್ಮದ ರಕ್ಷಣೆ ಹಾಗೂ ಭವ್ಯ ಭಾರತದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿದೆ. ಒಬ್ಬ ವ್ಯಕ್ತಿಯಾಗಿ ಕೇವಲ ತನ್ನ ಕುಟುಂಬದ ಬಗ್ಗೆ ಮಾತ್ರ ಯೋಚಿಸದೆ, ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮಹತ್ವದಾಗಿದೆ ಎಂದರು.
ಸುಬ್ರಹ್ಮಣ್ಯ ನಟೋಜ ಅವರು ಮಾತನಾಡಿ, ಹಿಂದೂ ಧರ್ಮದ ನಾಲ್ಕು ಪುರುಷಾರ್ಥಗಳ ಪ್ರಕಾರ ಸಾಧನೆ ಮಾಡಿದಾಗ ಮಾತ್ರ ನಾವು ನಿಜವಾದ ಹಿಂದೂಗಳಾಗುತ್ತೇವೆ. ಹಿಂದೂ ಧರ್ಮವು ನಮಗೆ ಅತ್ಯುತ್ಕೃಷ್ಟ ಮೌಲ್ಯಗಳನ್ನು ನೀಡಿದ್ದು, ನಮ್ಮ ಸಾಧನೆ ಮಾತ್ರ ಕೊನೆಯವರೆಗೂ ನಮ್ಮೊಂದಿಗೆ ಉಳಿಯುತ್ತದೆ. ಪ್ರತಿಯೊಂದು ಹಳ್ಳಿಯಲ್ಲೂ ಪ್ರತಿ ಮಗುವಿಗೂ ಹಿಂದುತ್ವದ ಶಿಕ್ಷಣ ನೀಡಬೇಕು ಎಂದರು.
ಸಜೀಪಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.
ಖ್ಯಾತ ಜ್ಯೋತಿಷ್ಯರಾದ ಅನಿಲ್ ಪಂಡಿತ್, ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಮಿಥುನ್ ಪೂಜಾರಿ, ನ್ಯಾಯವಾದಿಗಳಾದ ಬಿ.ವಿ. ಶೆಣೈ, ವಿನೋದ್, ಅಶ್ವನಿ, ಪ್ರೊ. ಗಿರೀಶ್ ಹೆಗ್ಡೆ, ಉದ್ಯಮಿ ತಾರಾನಾಥ್ ಕೊಟ್ಟಾರಿ, ಡಾ. ಶಿವಪ್ರಸಾದ್ ಶೆಟ್ಟಿ, ನಾಟಿ ವೈದ್ಯರಾದ ವಿಶ್ವನಾಥ್ ಪಂಡಿತ್, ದಿನೇಶ್ ಜೈನ್ ಪುತ್ತೂರು, ಮಾಧವ ಸ್ವಾಮಿಕಲಾಮಂದಿರ, ಕೃಷ್ಣ ಪ್ರಸಾದ್ ಲಕ್ಷ್ಮೀ ಬೆಟ್ಟ, ಪ್ರದೀಪ್, ಮನೋಹರ್ ಶಾಂತಿ ನಗರ, ನೋಣ್ಣಯ್ಯ ಪೂಜಾರಿ ಶಂಭುರು, ಸಂಜೀವ ಶೆಟ್ಟಿ, ನಾಗೇಶ್ ಕುದನೆ ಮತ್ತಿತರರು ಉಪಸ್ಥಿತರಿದ್ದರು.