Breaking news: ಧರ್ಮಸ್ಥಳ ಪ್ರಕರಣ: ಇಂದು 6ನೇ ಸ್ಥಳದಲ್ಲಿ ಕಳೇಬರ ಅವಶೇಷ ಪತ್ತೆ
Thursday, July 31, 2025
ಧರ್ಮಸ್ಥಳ: ಕಳೆದ ಒಂದು ತಿಂಗಳಿನಿಂದ ಭಾರಿ ಸದ್ದು ಮಾಡುತ್ತಿರುವ ಧರ್ಮಸ್ಥಳ ಪ್ರಕರಣಕ್ಕೆ ಇಂದು ಹೊಸ ತಿರುವ ಸಿಕ್ಕಿದ್ದು,ಕಳೆದ ಮೂರು ದಿನಗಳಿಂದ ಜನರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಕಾರ್ಯಾಚರಣೆಗೆ ಇಂದು ಉತ್ತರ ಸಿಕ್ಕಿದ್ದು ಆರನೇ ಸ್ಥಳದಲ್ಲಿ ಕಳೇಬರ ಅವಶೇಷ ಪತ್ತೆಯಾಗಿದೆ
ಕಳೆದ ನಾಲ್ಕು ದಿನಗಳಿಂದ ಧರ್ಮಸ್ಥಳದಲ್ಲಿ ಬೀಡು ಬಿಟ್ಟಿರುವ ಎಸ್ಐಟಿ ತಂಡ, 13 ಕಡೆಗಳಲ್ಲಿ ಗುರುತು ಮಾಡಿದ್ದು, ಕಳೆದ ಎರಡು ದಿನಗಳಿಂದ ಗುರುತು ಮಾಡಿದ ಐದು ಸ್ಥಳಗಳಲ್ಲಿ ಅಗೆದರೂ ಯಾವುದೇ ಕಳೆ ಬರ ಸಿಗದಿದ್ದು, ಇಂದು ಅಗೆದ ಆರನೇ ಸ್ಥಳದಲ್ಲಿ ಕಳೆಬರದ ಅವಶೇಷಗಳು ಪತ್ತೆಯಾಗಿದ್ದು ಜನರ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ.