
ಲಾರಿ-ಬೈಕ್ ಢಿಕ್ಕಿ: ಓರ್ವ ಸಾವು
Friday, July 25, 2025
ಕುಂದಾಪುರ: ಇಲ್ಲಿಗೆ ಸಮೀಪದ ಕೆರಾಡಿ ಗ್ರಾಮದ ಚಪ್ಪರಕ ಕೋಣ್‌ಬೇರು ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ರೋಧಿ ಲಾಲ್ ಎಂದು ಗುರುತಿಸಲಾಗಿದೆ.
ಕಾರಿಬೈಲು ಕಡೆಯಿಂದ ಕೆರಾಡಿ ಕಡೆಗೆ ಗುಂಡು ಎಂಬವರು ಬೈಕ್ ಚಲಾಯಿಸಿಕೊಂಡು ಬರುತ್ತಾ ಲಾರಿಗೆ ನೇರವಾಗಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಬೈಕ್ ಸಹಿತ ಬಿದ್ದಿದ್ದು, ಲಾರಿಯ ಚಕ್ರ ಬೈಕ್‌ನಲ್ಲಿದ್ದ ರೋಧಿ ಲಾಲ್ ತಲೆಯ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.