ಸೈದ್ದಾಂತಿಕ ಸಂಘರ್ಷವಿಲ್ಲದೆ ಕೋಮುವಾದ ನಾಶವಾಗದು: ಮುನೀರ್ ಕಾಟಿಪಳ್ಳ

ಸೈದ್ದಾಂತಿಕ ಸಂಘರ್ಷವಿಲ್ಲದೆ ಕೋಮುವಾದ ನಾಶವಾಗದು: ಮುನೀರ್ ಕಾಟಿಪಳ್ಳ


ಕುತ್ತಾರ್: ಜಿಲ್ಲೆಯಲ್ಲಿ ನಡೆಯುವ ಧರ್ಮ ದ್ವೇಷಗಳು ಕೊನೆಗೊಳ್ಳಲು ತಾತ್ಕಾಲಿಕ ರಾಜಕೀಯ ಬದಲಾವಣೆಯ ಜೊತೆಗೆ ಸೈದ್ಧಾಂತಿಕ ಸಂಘರ್ಷಗಳು ನಡೆದರಷ್ಟೇ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯ ಅದೇ ರೀತಿ ಸೌಹಾರ್ದತೆಯ ಕಾರ್ಯ ನಿರಂತರವಾಗಿರಬೇಕು ಎಂದು DYFI ಮಾಜಿ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.


ಅವರು ಇಂದು DYFI ಕುತ್ತಾರ್ ಘಟಕ ಹಾಗೂ ಗಂಡಿ ಘಟಕ ನೇತೃತ್ವದಲ್ಲಿ ಕುತ್ತಾರ್ ಸಮುದಾಯ ಭವನದಲ್ಲಿ ನಡೆದ  ಸೌಹಾರ್ದ 'ಯುವ ಸಮ್ಮಿಲನ' ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.


ಹಿರಿಯ ವಕೀಲ ರಾಮಚಂದ್ರ ಬಬ್ಬುಕಟ್ಟೆ ಮಾತನಾಡಿ, ತುಳುನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಧರ್ಮಾದಾರಿತ ಸಂಸ್ಥಗಳಿಂದ ಸೌಹರ್ದತೆಗೆ ಧಕ್ಕೆಯಾಗಿದ್ದು ಹಿಂದೆ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಒಂದೇ ಬೆಂಚ್ ನಲ್ಲಿ ಕೂರುವ ಸ್ಥಿತಿ ಇತ್ತು ಆದರೆ ಈಗ ಒಂದೊಂದು ಧರ್ಮಕ್ಕೆ ಶಾಲೆಗಳು ನಡೆಯುತ್ತಿದೆ ಈ ಪರಿಸ್ಥಿತಿ ಬದಲಾಗಬೇಕು ಎಂದರು,


DYFI ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಸಾಮರಸ್ಯಗಳು ನೆಲೆಯಾಗಬೇಕಾದರೆ ಯುವಜನರಿಗೆ ತಮ್ಮ ನೈಜ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ,ಶಿಕ್ಷಣ,ಉದ್ಯೋಗದ ವಿಚಾರಗಳು ಮುನ್ನಲೆಗೆ ಬರಬೇಕು ಆಗ ಸಾಮರಸ್ಯ ನೆಲೆಸಿ ಜನರ ಅಭಿವೃದ್ದಿಯು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಮಹಾಬಲ್ ಟಿ. ದೆಪ್ಪೆಲಿಮಾರ್, ಸದಸ್ಯ ಮುಸ್ತಾಫ್, DYFI ಮುಖಂಡರಾದ ಇಮ್ರಾನ್ ಗಂಡಿ, ಮಿಥುನ್ ಕುತ್ತಾರ್, ಸುರೇಶ್ ತಲೆನೀರು, ಶಿವಾನಿ ಕೊಲಂಬೆ ಉಪಸ್ಥಿತರಿದ್ದರು. 


ಸುನೀಲ್ ತೇವುಲ ಪ್ರಾಸ್ತಾವಿಕವಾಗಿ ಮಾತಾಡಿದರು. ನಿತಿನ್ ಕುತ್ತಾರ್ ಅಧ್ಯಕತೆ ವಹಿಸಿ, ದಿವ್ಯರಾಜ್ ತೇವುಲ ಸ್ವಾಗತಿಸಿ, ಸರ್ಫರಾಜ್ ಗಂಡಿ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article