
ಭಾರೀ ಮಳೆ: ತಡೆಗೋಡೆ ಕುಸಿತಕ್ಕೆ 15 ದ್ವಿಚಕ್ರ ವಾಹನಗಳಿಗೆ ಹಾನಿ
Thursday, July 17, 2025
ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ನಾಶ-ನಷ್ಟ ಉಂಟಾಗಿದೆ. ಮಂಗಳೂರು ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನ ಪಕ್ಕದ ಕಂಪೌಂಡ್ ಗೋಡೆ ಕುಸಿದು ಬಿದ್ದು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.
ಗ್ಯಾರೇಜ್ ರಿಪೇರಿಗೆಂದು ತಂದಿರಿಸಲಾಗಿದ್ದ ದ್ವಿಚಕ್ರ ವಾಹನಗಳನ್ನು ಕಂಪೌಂಡ್ ಗೋಡೆಯ ಉದ್ದಕ್ಕೂ ಇಡಲಾಗಿತ್ತು. ರಾತ್ರಿ ವೇಳೆ ಕಂಪೌಂಡ್ ಗೋಡೆ ಕುಸಿದಿದ್ದು, ಕಲ್ಲು ಮಣ್ಣು ಬೈಕ್, ಸ್ಕೂಟರ್ ಮೇಲೆ ಬಿದ್ದಿದೆ. ಅಲ್ಲಿಯೇ ಪಕ್ಕದಲ್ಲಿ ಇರಿಸಲಾಗಿದ್ದ ಇನ್ನೋವಾ ಕಾರಿಗೂ ಗೋಡೆ ಕುಸಿದು ಬಿದ್ದು ಕಾರಿಗೆ ಹಾನಿಯಾಗಿದೆ.