
ಶಕ್ತಿ ವಸತಿ ಶಾಲೆಯಲ್ಲಿ 'ಸಿಬಿಎಸ್‌ಇ ಸ್ಕಿಲ್ ಎಕ್ಸ್‌ಪೊ ಮತ್ತು ಗೈಡೆನ್ಸ್ ಫೆಸ್ಟಿವಲ್-2025'
ಮಂಗಳೂರು: ಮಂಗಳೂರಿನ ಶಕ್ತಿ ವಸತಿ ಶಾಲೆಯು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ ಜುಲೈ 30 ರಂದು ಸಿಬಿಎಸ್‌ಸಿ ಸ್ಕಿಲ್ ಎಕ್ಸ್‌ಪೊ ಮತ್ತು ಗೈಡೆನ್ಸ್ ಫೆಸ್ಟಿವಲ್ 2025ನ್ನು ಆಯೋಜಿಸಲು ಆಯ್ಕೆಯಾಗಿದೆ.
ಸಿಬಿಎಸ್‌ಇ ಕೌಶಲ್ಯ ಶಿಕ್ಷಣ ಇಲಾಖೆಯ ಉಪಕ್ರಮವಾದ ಈ ಪ್ರತಿಷ್ಠಿತ ಕಾರ್ಯಕ್ರಮವು ಕರ್ನಾಟಕದಾದ್ಯಂತ ಸಿಬಿಎಸ್‌ಇ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ವೃತ್ತಿ ಅವಕಾಶಗಳು, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆಗಳನ್ನು ಅನ್ವೇಷಿಸುತ್ತದೆ.
ಈ ಉತ್ಸವವನ್ನು ಇಂಡಿಯಾನಾ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಉದ್ಘಾಟಿಸಲಿದ್ದಾರೆ. ಜೊತೆಗೆ ಪ್ರಮುಖ ಗಣ್ಯರುಗಳಾದ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾಯಕ್, ಸಿಬಿಎಸ್‌ಇ ಕೌಶಲ್ಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸತೀಶ್ ಪಹಲ್, ಯುಕೆ ಗ್ರೂಪ್‌ನ ಅಧ್ಯಕ್ಷ ಯು.ಕೆ. ಯೂಸುಫ್, ಪ್ರದರ್ಶನ ತರಬೇತುದಾರೆ ತನುಜಾ ಮಾಬೆನ್, ಲೈಫಾಲಜಿ ಫೌಂಡೇಶನ್‌ನ ಸಹ-ಸಂಸ್ಥಾಪಕ ರಾಹುಲ್ ಜೆ. ನಾಯರ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸಂಜಿತ್ ನಾಯಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಸಲಹೆಗಾರ ರಮೇಶ್ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿರುತ್ತಾರೆ.
ಮಾರ್ಗದರ್ಶನ ಉತ್ಸವವು 21ನೇ ಶತಮಾನದ ಅಗತ್ಯ ಕೌಶಲ್ಯಗಳು, ಮಾನಸಿಕ ಸ್ವಾಸ್ಥ್ಯ ಮತ್ತು ಅರ್ಥಪೂರ್ಣ ವೃತ್ತಿ ಆಯ್ಕೆಗಳ ಕುರಿತು ತಜ್ಞರ ನೇತೃತ್ವದ ಮೂರು ಅವಧಿಗಳನ್ನು ಒಳಗೊಂಡಿರುತ್ತದೆ. ಕೌಶಲ್ಯ ಪ್ರದರ್ಶನ ಸ್ಪರ್ಧೆಯು ವಿದ್ಯಾರ್ಥಿಗಳಿಂದ ನವೀನ ಯೋಜನೆಗಳಾದ ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಸ್ವಾಸ್ಥ್ಯ, ಉದ್ಯಮಶೀಲತೆ ಮತ್ತು ಆರ್ಥಿಕ ಸಾಕ್ಷರತೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಮಾಧ್ಯಮ ಮತ್ತು ವಿನ್ಯಾಸ ಈ ಎಲ್ಲ ವಿಷಯಗಳ ಅಡಿಯಲ್ಲಿ ಪ್ರದರ್ಶಿಸುತ್ತದೆ.
ಈ ಉಪಕ್ರಮವು ಸಿಬಿಎಸ್‌ಇಯ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ಕ್ಕೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಕೌಶಲ್ಯ ಶಿಕ್ಷಣ, ಅನುಭವದ ಕಲಿಕೆ ಮತ್ತು ಭವಿಷ್ಯದ ಸಿದ್ಧತೆಗೆ ಒತ್ತು ನೀಡುತ್ತದೆ.