ಕೆಂಪು ಕಲ್ಲು, ಮರಳು ಸಮಸ್ಯೆ-ಹೋರಾಟದ ಎಚ್ಚರಿಕೆ

ಕೆಂಪು ಕಲ್ಲು, ಮರಳು ಸಮಸ್ಯೆ-ಹೋರಾಟದ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಪೂರೈಕೆ ಸಮಸ್ಯೆಯನ್ನು ವಾರದೊಳಗೆ ಇತ್ಯರ್ಥಗೊಳಿಸಬೇಕು. ಇಲ್ಲವಾದರೆ ತೀವ್ರ ರೂಪದ ಹೋರಾಟ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಹೇಳಿದರು.

ಜಿಲ್ಲೆಯಲ್ಲಿ ದುಡಿಯುವ ವರ್ಗದ ಬಹುತೇಕ ಜನರ ಆದಾಯ ಕೆಂಪು ಕಲ್ಲು, ಮರಳು ಪೂರೈಕೆಯನ್ನು ಅವಲಂಬಿಸಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿಧಿಸಿದ ನಿರ್ಬಂಧಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಪರಿಣಾಮ ಕಾರ್ಮಿಕರು, ಗುತ್ತಿಗೆದಾರರು ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಗಣಿಗಾರಿಕೆಗೆ ರಾಜ್ಯ ಸರ್ಕಾರ ವಿಽಸಿದ ಹೊಸ ರಾಯಲ್ಟಿ ನೀತಿಯಿಂದ ಜನಸಾಮಾನ್ಯರಿಗೆ ಕೆಂಪು ಕಲ್ಲು, ಮರಳು, ಜಲ್ಲಿ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಜನರಿಗೆ ಕೈಗೆಟಕುವ ದರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸದ್ಯ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಇರ್ಫಾನ್ ಕಾನ ಮಾತನಾಡಿ, ಹೊರ ರಾಜ್ಯಕ್ಕೆ ಅಕ್ರಮವಾಗಿ ನಡೆಯುವ ಮರಳು ಸಾಗಟವನ್ನು ತಡೆಯಬೇಕು. ಈ ಹಿಂದೆ ಮೂರು ಯುನಿಟ್ ಮರಳಿಗೆ 350 ರೂ. ರಾಯಲ್ಟಿ ದರ ಇದ್ದಾಗ ಮೂರು ಸಾವಿರಕ್ಕೆ ಜನರಿಗೆ ಮರಳು ಸಿಗುತ್ತಿತ್ತು. ಈಗ ಜಿಲ್ಲಾಡಳಿತದ ಕಟ್ಟು ನಿಟ್ಟಿನಿಂದಾಗಿ ರಾಯಲ್ಟಿ ದರ 1800 ರೂ. ಆಗಿದ್ದು ಮರಳಿನ ದರ ಇಪ್ಪತ್ತು ಸಾವಿರಕ್ಕೂ ಅಽಕವಾಗಿದೆ. ಜಿಲ್ಲಾಡಳಿತ ರಾಯಲ್ಟಿ ದರವನ್ನು ಕಡಿತಗೊಳಿಸಬೇಕು.

ನಾನ್ ಸಿಆರ್ಝಡ್ ಪ್ರದೇಶದಲ್ಲಿ ಮರಳು ತೆಗೆಯಲು ಅನುಮತಿ ಇದ್ದು ಅದನ್ನು ಜಿಲ್ಲಾಡಳಿತ ತಡೆ ಹಿಡಿದಿದೆ. ಇದರಿಂದ ಮರಳು ಪೂರೈಕೆ ಸ್ಥಗಿತಗೊಂಡಿದ್ದು ಕೂಡಲೇ ಅದಕ್ಕೆ ಅನುಮತಿ ನೀಡಬೇಕು. ಮರಳಿಗೆ ಸರಕಾರವೇ ದರವನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್, ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಇಕ್ಬಾಲ್ ಬಿ.ಪಿ., ಪ್ರಮುಖರಾದ ಶರೀಫ್ ಕುತ್ತಾರ್, ಇಲ್ಯಾಸ್ ಬೆಂಗರೆ, ಮುಸ್ತಫಾ ಪರ್ಲಿಯಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article