
ಕಾಲು ಸಂಕದ ತಡೆಗೋಡೆ ಕುಸಿತ: ಹೆದ್ದಾರಿಗೆ ಗುಡ್ಡದ ಮಣ್ಣು ಜರಿದು ಸಂಚಾರಕ್ಜೆ ಅಡಚಣೆ
Friday, July 18, 2025
ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕುಮೇರು ಎಂಬಲ್ಲಿನ ಕಾಲು ಸಂಕದ ಬದಿಗೆ ಕಟ್ಟಿದ ತಡೆಗೋಡೆ ಜರಿದು ಅಪಾಯದ ಸ್ಥಿತಿಯಲ್ಲಿದೆ.
ವೀರಕಂಭದಿಂದ ಕುಮೇರು, ಕೆಮ್ಮಟೆ, ಲಾಡ, ಸಿಂಗೇರಿ,, ಕಿನ್ನಿ ಮೂಲೆ, ಗುಡ್ಡೆ ತೋಟ ಪ್ರದೇಶದ ನಿವಾಸಿಗಳು ಈ ಕಾಲು ದಾರಿಯನ್ನೇ ಅವಲಂಬಿತರಾಗಿದ್ದಾರೆ. ಮಳೆಯಿಂದಾಗಿ ತೋಡಿನಲ್ಲು ನೀರು ತುಂಬಿ ಹರಿಯುತ್ತಿದ್ದು,ಅಪಾಯದ ಮುನ್ಸೂಚನೆ ನೀಡಿದೆ.
ಅಲ್ಲದೆ ದಿನ ನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಈ ಕಾಲು ಸಂಕದ ಮೇಲಿಂದಲೇ ನಡೆದಾಡುತ್ತಿದ್ದು,ಸದ್ಯ ಅಪಾಯವನ್ನು ಆಹ್ವಾನಿಸುತ್ತಿರುವ ಈ ಕಾಲು ಸಂಕವನ್ನು ತುರ್ತಾಗಿ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುಡ್ಡ ಕುಸಿತ:
ಈ ನಡುವೆ ಬಿ.ಸಿ.ರೋಡು- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮಧ್ಯೆ ಬಂಟ್ವಾಳದಿಂದ ಸುಮಾರು 5 ಕಿ.ಮೀ ದೂರದ ಬಡಗುಂಡಿ ಎಂಬಲ್ಲಿ ಗುಡ್ಡೆಯ ಮಣ್ಣು ಜರಿದು ಹೆದ್ದಾರಿಗೆ ಬಿದ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ರಸ್ತೆಗೆ ಬಿದ್ದಿದೆ. ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಸುದ್ದಿ ತಿಳಿದ ಲೋಕೋಪಯೋಗಿ ಇಲಾಖೆ ಶುಕ್ರವಾರ ಬೆಳಗ್ಗೆ ಜೇಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗಿದೆ.