
ಮಳೆಗೆ ಹಲವೆಡೆ ಅನಾಹುತ: ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಶಾಸಕ ಕಾಮತ್ ಭೇಟಿ-ಪರಿಶೀಲನೆ
Friday, July 18, 2025
ಮಂಗಳೂರು: ನಗರದೆಲ್ಲೆಡೆ ಸುರಿದ ಭಾರೀ ಮಳೆಗೆ ಹಲವೆಡೆ ಪ್ರಾಕೃತಿಕ ಅನಾಹುತಗಳು ಸಂಭವಿಸಿದ್ದು ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮರೋಳಿ ವಾರ್ಡ್ ಸಂಖ್ಯೆ 37ಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸತತ ಮಳೆಯಿಂದಾಗಿ ಅಡುಮರೋಳಿ ಶೋಭಾ ಶೆಟ್ಟಿ ಎಂಬುವವರ ಮನೆಯ ಎತ್ತರದ ಕಾಂಪೌಂಡ್ ಕುಸಿದು ಅಪಾರ ನಷ್ಟವುಂಟಾಗಿದೆ. ಅಲ್ಲದೇ ಪಾಂಪು ಮನೆ, ಸುಶಾಂತ್ ಪೂಜಾರಿ, ಮಹಾಬಲ ಎಂಬುವವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದಾಗಿ ಮನೆಗಳಿಗೂ ಹಾನಿಯಾಗುವ ಸಂಭವವಿದ್ದು ಕೂಡಲೇ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಶಾಂತ್ ಮರೋಳಿ, ಜಗದೀಶ್ ಶೆಣೈ, ಜಗನ್ನಾಥ ದೊಡ್ಡಮನೆ, ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.