
ಎಸಿಪಿಯಾಗಿ ವಿಜಯಕ್ರಾಂತಿ
Friday, July 18, 2025
ಮಂಗಳೂರು: ಯಾದಗಿರಿ ಡಿವೈಎಸ್ಪಿ ಆಗಿ ವರ್ಗಾವಣೆಗೊಂಡಿದ್ದ ವಿಜಯಕ್ರಾಂತಿ ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಹುದ್ದೆಗೆ ಮರು ವರ್ಗಾವಣೆ ಮಾಡಲಾಗಿದೆ.
ಒಂದೂವರೆ ತಿಂಗಳ ಹಿಂದೆ ಮಂಗಳೂರು ದಕ್ಷಿಣ ಎಸಿಪಿಯಾಗಿ ನಿಯೋಜಿಸಲ್ಪಟ್ಟಿದ್ದ ಪ್ರಕಾಶ್ ಸ್ವಂತ ಕೋರಿಕೆಯ ಮೇರೆಗೆ ಅಲ್ಲಿಂದ ಬೆಂಗಳೂರು ಸಿಐಡಿ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ ಒಂದೂವರೆ ವರ್ಷದಿಂದ ಧನ್ಯ ನಾಯಕ್ ಎಸಿಪಿ ಆಗಿದ್ದರು. ಅದಕ್ಕೂ ಹಿಂದೆಯೂ ಈ ಹುದ್ದೆಯಲ್ಲಿ ಮಹಿಳಾ ಅಧಿಕಾರಿಯೇ ಇದ್ದರು. ಇದೀಗ ಮತ್ತೊಮ್ಮೆ ಮಹಿಳಾ ಅಧಿಕಾರಿ ವಿಜಯಕ್ರಾಂತಿ ಬಂದಿದ್ದಾರೆ.