
ಯುವ ಪ್ರತಿಭೆ, ವಕೀಲೆ ರಾಜಶ್ರೀ ಇನ್ನಿಲ್ಲ
Friday, July 25, 2025
ಮಂಗಳೂರು: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವ ಪ್ರತಿಭೆ ರಾಜಶ್ರೀ ಜೆ ಪೂಜಾರಿ(25) ಅವರು ನಿಧನರಾಗಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ರಾಜಶ್ರೀ ಜೆ ಪೂಜಾರಿ ಅವರು ಸಾಹಿತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರು ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ರಾಜಶ್ರೀ ಅವರು ಸರೋಜಿನಿ ಮತ್ತು ಜಯರಾಜ್ ದಂಪತಿಗಳ ಪುತ್ರಿ. ಅವಿವಾಹಿತೆ.