ಕರಾವಳಿಯಲ್ಲಿ ಆರೆಂಜ್ ಅಲರ್ಟ್

ಕರಾವಳಿಯಲ್ಲಿ ಆರೆಂಜ್ ಅಲರ್ಟ್

ಮಂಗಳೂರು: ಕಳೆದ ಒಂದು ದಿನದಿಂದ ಕರಾವಳಿಯಾಧ್ಯಂತ ಮಳೆ ಪ್ರಮಾಣ ಏರಿಕೆ ಕಂಡಿದ್ದು, ಮಂಗಳವಾರ ದ.ಕ ಜಿಲ್ಲೆಯಲ್ಲಿ ದಿನಪೂರ್ತಿ ಮಳೆಯಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ತುಸು ಹೆಚ್ಚಳವಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆಯನ್ನು ಐಎಂಡಿ ಮಾಡಿದೆ.  

 ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ಜಿಲ್ಲಾ ಕೇಂದ್ರ ಬಾಗದಲ್ಲಿ ವರ್ಷಧಾರೆಯಲ್ಲಿ ಏರಿಕೆ ಕಾಣಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದಲ್ಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ಏರಿಕೆ ಕಾರಣದಿಂದ ಬಂಟ್ವಾಳ, ಉಳ್ಳಾಲ ಭಾಗದಲ್ಲಿ ಅಂಗನವಾಡಿ, ಶಾಲೆ, ಪ್ರೌಢಶಾಲೆಗಳಿಗೆ ರಜೆ ಯನ್ನು ಸಂಬಂಧಿಸಿದ ತಾಲೂಕುಗಳ ತಹಸೀಲ್ದಾರ್‌ಗಳು ಘೋಷಣೆ ಮಾಡಿದ್ದರು. ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಮಳೆ ಮುಂದುವರಿಯುವ ಲಕ್ಷಣಗಳಿವೆ. ಈಗಿನಂತೆ ಜುಲೈ 16ರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.

 ಆವರಣ ಗೋಡೆಗಳು ಕುಸಿತ:

 ಬುಧವಾರ ಮುಂಜಾನೆಯಿಂದಲ್ಲೇ ನಿರಂತರವಾಗಿ ಹದವಾದ ಮಳೆ ಸುರಿದಿದೆ. ಮಂಗಳೂರು ನಗರ ಭಾಗದ ಕೆಲವೊಂದು ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾದ ಕಾರಣದಿಂದ ರಸ್ತೆಗಳಲ್ಲಿ ಮಳೆಯ ನೀರು ಹರಿದು ವಾಹನ ಸವಾರರಿಗೆ ಅಡ್ಡಿಯಾಗಿತ್ತು. ಮಂಗಳೂರಿನ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಶೇಖರಣೆಗೊಂಡ ಕಾರಣದಿಂದ  ಅಸುಪಾಸಿನ ಜನರಿಗೆ ಸಮಸ್ಯೆಯಾಗಿತ್ತುಘಿ. ಮನಪಾ ವ್ಯಾಪ್ತಿಯಲ್ಲಿ 8ಕ್ಕೂ ಅಧಿಕ ಆವರಣ ಗೋಡೆಗಳು ಕುಸಿದು ಬಿದ್ದಿದೆ.

 ದ.ಕ ಜಿಲ್ಲೆಯಲ್ಲಿ 54.2 ಮಿ.ಮೀ ಮಳೆ:

 ಉಳಿದಂತೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಮಳೆ ಸಾಕಷ್ಟು ಉತ್ತಮವಾಗಿದ್ದು, ಕೆಲವೊಂದು ಕಡೆಯಲ್ಲಿ ವಿದ್ಯುತ್ ವ್ಯತ್ಯಯ ಕೂಡ ಕಾಣಿಸಿಕೊಂಡಿದೆ.  ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸುರಿದ ಮಳೆ 54.2 ಮಿ.ಮೀ ಆಗಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನದಾಗಿತ್ತು ಎಂದು ಡಿಡಿಎಂಎ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾದರೆ ಮೆಸ್ಕಾಂ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಕಡಲು ಪ್ರಕ್ಷುಬ್ದವಾಗಿರುವ ಕಾರಣದಿಂದ ಮುಂದಿನ ನಾಲ್ಕೈದು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.

 ಮಂಗಳೂರಿನಲ್ಲೇ ಹೆಚ್ಚು ಮಳೆ:

 ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಬಿದ್ದ ಮಳೆಯಲ್ಲಿ  92.1 ಮಿ.ಮೀ ಮಂಗಳೂರಿನಲ್ಲೇ ಹೆಚ್ಚು ಮಳೆಯಾಗಿದೆ. ಉಳಿದಂತೆ  ಮೂಡುಬಿದಿರೆಯಲ್ಲಿ 77.4 ಮಿ.ಮೀ, ಉಳ್ಳಾಲದಲ್ಲಿ 75.3 ಮಿ.ಮೀ, ಬೆಳ್ತಂಗಡಿಯಲ್ಲಿ 39.9 ಮಿ.ಮೀ, ಬಂಟ್ವಾಳದಲ್ಲಿ 65.8 ಮಿ.ಮೀ, ಪುತ್ತೂರಿನಲ್ಲಿ 46.5 ಮಿ.ಮೀ, ಸುಳ್ಯದಲ್ಲಿ 49.1 ಮಿ.ಮೀ, ಕಡಬದಲ್ಲಿ 45.1 ಮಿ.ಮೀ, ಮೂಲ್ಕಿಯಲ್ಲಿ 65.5 ಮಿ.ಮೀ ಮಳೆ ಸುರಿದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article