ಮೂಡುಬಿದಿರೆ ರೋಟರಿ ಟೆಂಪಲ್ ಟೌನ್-2025ರ ನೂತನ ಪದಾಧಿಕಾರಿಗಳ ಪದಗ್ರಹಣ: ಸಹಾಯಧನ ವಿತರಣೆ

ಮೂಡುಬಿದಿರೆ ರೋಟರಿ ಟೆಂಪಲ್ ಟೌನ್-2025ರ ನೂತನ ಪದಾಧಿಕಾರಿಗಳ ಪದಗ್ರಹಣ: ಸಹಾಯಧನ ವಿತರಣೆ


ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾಯ೯ಕ್ರಮವು ಮೂಡುಬಿದಿರೆಯ ಪ್ರೀತಂ ಸಭಾಭವನದಲ್ಲಿ ಬುಧವಾರ ರಾತ್ರಿ ನಡೆಯಿತು.

ರೋಟರಿ ಜಿಲ್ಲೆ 3181 ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಅವರು ನೂತನ ಅಧ್ಯಕ್ಷ ಹರೀಶ್ ಎಂ.ಕೆ, ಕಾರ್ಯದರ್ಶಿ ಭರತ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ  ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಪ್ರತಿಯೊಬ್ಬರೂ ಅವರವರ ಕ್ಷೇತ್ರದಲ್ಲಿ ನಾಯಕರೇ ಆಗಿದ್ದಾರೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ ಎಂದ ಅವರು ರೋಟರಿ ಕ್ಲಬ್ ವಿಶ್ವದ್ಯಂತ ಜನಪರ ಕಾರ್ಯ ನಡೆಸುತ್ತಿರುವ ಶ್ರೇಷ್ಠ ಕ್ಲಬ್ ಆಗಿದೆ. ರೋಟರಿಗೆ ಅದರ ಸದಸ್ಯರುಗಳೇ ರಾಯಭಾರಿಗಳು. ಹಾಗಾಗಿ ರೋಟರಿ ಸದಸ್ಯರ ಶಿಸ್ತು ಅಚ್ಚುಕಟ್ಟುತನ ನಿಷ್ಠೆ ಮಾದರಿಯಾಗುತ್ತದೆ ಎಂದು ಹೇಳಿದರು.

ನಿರ್ಗಮಿತ ಅಧ್ಯಕ್ಷ ಪೂರ್ಣಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಸೇವಾ ಚಟುವಟಿಕೆ: 10 ಮಂದಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಓರ್ವರಿಗೆ ವೀಲ್ ಚೇರ್, ಗಾಂಧಿನಗರ ಅಂಗನವಾಡಿಗೆ ಸ್ಕೂಲ್ ಬ್ಯಾಗ್, ಡಯಾಲಿಸಿಸ್ ವ್ಯಕ್ತಿಗೆ 10,000 ಸಹಾಯಧನ ವಿತರಿಸಲಾಯಿತು. 

ಐದು ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು. ನಿಕಟಪೂರ್ವ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ ಕೆ, ಕೋಶಾಧಿಕಾರಿ ಅಜಯ್ ಗ್ಲೆನ್ ಡಿಸೋಜಾ, ಯಂಗ್ ಏಚೀವರ್ ರಾಜ್ ಬಂಗೇರ, ಅವನಿ ಉಮೇಶ್ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟೌನ್ ಬುಲೆಟಿನ್ ನನ್ನು ಬಿಡುಗಡೆಗೊಳಿಸಲಾಯಿತು.

ರೋಟರಿ ವಲಯ ಸೇನಾನಿ ಸಿ.ಎಚ್ ಗಫೂರ್, ಡಾ.ಹರೀಶ್ ನಾಯಕ್, ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್ ಉಪಸ್ಥಿತರಿದ್ದರು.

ಮಹಾವೀರ್ ಜೈನ್ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ನೂತನ ಅಧ್ಯಕ್ಷರನ್ನು ಅಮರ್ ದೀಪ್ ಪರಿಚಯಿಸಿದರು. ನೂತನ ಕಾರ್ಯದರ್ಶಿಯನ್ನು ಜೀವಿತಾ ಶಂಕರ್,  ಪ್ರಿಯಾ ಅನೂಪ್ ನೂತನ ಸದಸ್ಯರನ್ನು, ಸಾರಿಕಾ ಬಂಗೇರ ಅಸಿಸ್ಟೆಂಟ್ ಗವರ್ನರ್ ಅವರನ್ನು ದೀಪ್ತಿ ಬಾಲಕೃಷ್ಣ ಭಟ್ ವಲಯ ಸೇನಾನಿ ಅವರನ್ನು ಪರಿಚಯಿಸಿದರು. 

ಅಪೇಕ್ಷ ಪೂರ್ಣಚಂದ್ರ ಪ್ರಾರ್ಥನೆಗೈದರು. ಕಾರ್ಯದರ್ಶಿ ಭರತ್ ಶೆಟ್ಟಿ ವಂದಿಸಿದರು. ಶಂಕರ್ ಕೋಟ್ಯಾನ್ ಮತ್ತು ಪ್ರಣಮ್ಯ ಜೈನ್ , ಪ್ರವೀಣ್ ಲೋಬೊ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article