ಸುಬ್ರಹ್ಮಣ್ಯ: ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪತ್ನಿ ಜೊತೆ ಭೇಟಿ ನೀಡಿದರು. ಡಾ. ಪರಮೇಶ್ವರ್ ದಂಪತಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ಮಂತ್ರಾಕ್ಷತೆ ಪಡೆದರು. ಸ್ವಾಮೀಜಿ ಅವರು ಗೃಹ ಸಚಿವರನ್ನು ಗೌರವಿಸಿದರು.