4 ದಿನಗಳ ಸಾರ್ವಜನಿಕ ಗಣೇಶೋತ್ಸವ ಸಂಪನ್ನ: ಅದ್ದೂರಿಯ ಶೋಭಾಯಾತ್ರೆ
ಸಂಜೆ ಪೂಜಾ ಸಭಾಂಗಣದಿಂದ ಶ್ರೀಗಣೇಶನ ಅದ್ದೂರಿಯ ಶೋಭಾಯಾತ್ರೆಯು ರಾ.ಹೆ.ಯಲ್ಲಿ ಕೈಕಂಬ ಪೊಳಲಿ ದ್ವಾರದವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ಬಿ.ಸಿ.ರೋಡು ಬ್ರಹ್ಮಶ್ರೀನಾರಾಯಣಗುರುವೃತ್ತದ ಬಳಿ ಎಡಕ್ಕೆ ತಿರುಗಿ ಭಂಡಾರಿಬೆಟ್ಟುವರೆಗೆ ತೆರಳಿ ಬಳಿಕ ನೆರೆವಿಮೋಚನಾ ರಸ್ತೆ ಮೂಲಕ ಬಂಟ್ವಾಳಕ್ಕೆ ಬಂದು ಶ್ರೀತಿರುಮಲ ವೆಂಕಟರಮಣ ಸ್ವಾಮಿ ದೇವಳದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಎಸ್.ಆರ್.ಕೈಕಂಬ ಬಳಗದಿಂದ ಕಬ್ಬನ್ನು ಜೋಡಿಸಿ ಸಿದ್ದಪಡಿಸಲಾದ ಬೃಹತ್ ಹಾರವನ್ನು ಶ್ರೀಗಣೇಶನ ವಿಗ್ರಹಕ್ಕೆ ಸಮರ್ಪಿಸಲಾಯಿತು.ಹುಲಿವೇಷದ ಅಬ್ಬರ, ವಿವಿಧ ಸಂಘಟನೆಗಳ ಆಕರ್ಷಕವಾದ ಟ್ಯಾಬ್ಲೋ, ಸ್ತಬ್ದಚಿತ್ರ, ಮಕ್ಕಳ ಕುಣೊತ ಭಜನೆ, ಚಿಲಿಪಿಲಿಗೊಂಬೆ ಕುಣಿತ, ವಾದ್ಯಗೋಷ್ಠಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ನಾಸಿಕ್ ಬ್ಯಾಮನಡ್ ಕೇರಳ ಚೆಂಡೆಗೆ ಈಬಾರಿ ಅವಕಾಶವಿಲ್ಲದಿದ್ದು ಭಕ್ತರಲ್ಲಿ ನಿರಾಸೆ ಮೂಡಿಸಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಸದತೆಯ ಇಕ್ಜೆಲಗಳಲ್ಲಿ, ರಸ್ತೆಯಲ್ಲಿ ನಿಂತು ಗಣೇಶನ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.ಸುಡುಮದ್ದು ಪ್ರದರ್ಶನವು ಕಣ್ಮನಸೆಳೆಯಿತು.
ಮೆರವಣಿಗೆಯಲ್ಲು ಮೊಟಕು:
ಪೊಲೀಸರು ಸುತ್ತೋಲೆ ಹೊರಡಿಸಿರುವ ಹಿನ್ನಲೆಯಲ್ಲಿ ಈಬಾರಿ ಗಣೇಶನ ಶೋಭಾಯಾತ್ರೆಯಲ್ಲು ಮೊಟುಕುಗೊಂಡಿದೆ. ಪ್ರತಿವರ್ಷ ಬ್ರಹ್ಮರಕೊಟ್ಲುವಿನ ಟೋಲ್ ಗೇಟ್ ಸಮೀಪದ ಗಣಪತಿಕಟ್ಟೆಯವರೆಗೆ ತೆರಳಬೇಕಾಗಿದ್ದ ಶೋಭಾಯಾತ್ರೆ ಕೈಕಂಬದವರೆಗೆ ಮಾತ್ರ ಸಾಗಿ ಅಲ್ಲಿಂದಲೇ ತಿರುಗಿ ವಾಪಾಸ್ ಬಂದು ಭಂಡಾರಿಬೆಟ್ಡು ಮೂಲಕ ಬಂಟ್ವಾಳಕ್ಕಾಗಮಿಸಿ ನೇತ್ರಾವತಿಯಲ್ಲಿ ಜಲಸ್ತಂಭನಗೊಳಿಸಲಾಗಿದೆ.