ರಾಷ್ಟ್ರೀಯ ಕ್ರೀಡಾ ದಿನಾಚರಣೆ

ರಾಷ್ಟ್ರೀಯ ಕ್ರೀಡಾ ದಿನಾಚರಣೆ


ಮಂಗಳೂರು: ಮೇಜರ್ ಧ್ಯಾನ್‌ಚಂದ್ ಹಾಕಿ ಮಾಂತ್ರಿಕ ಇವರ ಜನ್ಮ ದಿನದ ಪ್ರಯುಕ್ತ ಮಂಗಳಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. 

ಉದ್ಘಾಟಿಸಿದ ಕಾಮನ್‌ವೆಲ್ತ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಪುಷ್ಪರಾಜ್ ಹೆಗಡೆ, ಮೇಜರ್ ಧ್ಯಾನ್‌ಚಂದ್ ಅವರು ಹಾಕಿ ಕ್ರೀಡೆಯಲ್ಲಿ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ, ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಲು ಶಿಸ್ತು ಹಾಗೂ ನಿರಂತರ ಪರಿಶ್ರಮದಿಂದ ಸಾಧನೆ ಮಾಡುವುದು ಅಗತ್ಯವಾಗಿರುತ್ತದೆ. ಕ್ರೀಡೆಯಲ್ಲಿ ವಿಜೇತರಾಗಲು ಯಾವುದೇ ಕಿರುದಾರಿ ಬಳಸದೇ ನಿರಂತರ ಪರಿಶ್ರಮ ಹಾಗೂ ಕ್ರೀಡಾ ಅಭ್ಯಾಸದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾಧನೆ ಮಾಡುವಂತೆ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ಮೆಸ್ಕಾಂ ಮಂಗಳೂರು ವಿಭಾಗದ ಕಂಟ್ರೋಲರ್ ಉಮೇಶ್ ಗಟ್ಟಿ ಇವರು ಮಾತನಾಡಿ ದೇಶಕ್ಕೆ, ರಾಜ್ಯಕ್ಕೆ ಕ್ರೀಡಾ ವಿಭಾಗದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳಿಗೆ ಕೀರ್ತಿ ತರುವಂತೆ ಹಾರೈಸಿದರು.

ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇಯ್ಟ್ ಲಿಫ್ಟಿಂಗ್ ಕ್ರೀಡೆಗೆ ವಿಶಿಷ್ಟ ಕೊಡುಗೆ ನೀಡಿದ ಪುಷ್ಪರಾಜ್ ಹೆಗಡೆ ಇವರನ್ನು ಸನ್ಮಾನಿಸಲಾಯಿತು.

ಭಾರತ್ ಯುವ ಅಧಿಕಾರಿ ಉಲ್ಲಾಸ್ ಹಾಗೂ  ಕ್ರೀಡಾ ಇಲಾಖೆ ಅಧೀಕ್ಷಕಿ ರಜನಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜ ಸ್ವಾಗತಿಸಿದರು.  ಅಥ್ಲೆಟಿಕ್ ಕ್ರೀಡಾಪಟು ಆಯುಷ್ ದೇವಾಡಿಗ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article