400 ಕೆ.ವಿ ವಿದ್ಯುತ್ ಪ್ರಸರಣ ಸಂತ್ರಸ್ತ ರೈತರ ಸಭೆ
Sunday, August 24, 2025
ಬಂಟ್ವಾಳ: ಉಡುಪಿ-ಕಾಸರಗೋಡು ನಡುವೆ ಹಾದು ಹೋಗಲಿರುವ 400 ಕೆ.ವಿ ವಿದ್ಯುತ್ ಪ್ರಸರಣ ಸಂತ್ರಸ್ತ ರೈತರ ಸಭೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆಯಿತು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್, ತಾಲೂಕು ರೈತರ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ರೈತ ಸಂಘದ ಮುಖಂಡರಾದ ರೂಪೇಶ್ ರೈ ಅಲಿಮಾರ್, ವಿನೋದ್ ಭಟ್ ಪಾದೆ ಕಲ್ಲು, ಇಬ್ರಾಹಿಂ ಕಲೀಲ್, ಚಂದ್ರಹಾಸ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ರಾಜೀವಗೌಡ, ಸಂತ್ರಸ್ತ ರೈತರಾದ ಶ್ಯಾಮ್ ವಿಟ್ಲ, ಕೃಷ್ಣಪ್ರಸಾದ್ ತಂತ್ರಿ, ಅಶೋಕ್, ಜೆಸಿಂತಾ ಮತ್ತಿತರರು ಇದ್ದರು.
ಸಂತ್ರಸ್ತ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು.