ಬಂಟ್ವಾಳದಲ್ಲಿ ಸಂಭ್ರಮದ ಮೊಸರುಕುಡಿಕೆ ಉತ್ಸವ
ಬೆಳಗ್ಗೆ ಶ್ರೀ ಕೃಷ್ಣ ಪ್ರತಿಬಿಂಬದ ವೈಭವಪೂರ್ಣ ಶೋಭಾಯಾತ್ರೆಯು ಬಂಟ್ವಾಳ ನಗರದಲ್ಲಿ ನಡೆಯಿತು. ಭಂಡಾರಿಬೆಟ್ಟು ಶ್ರೀಕೃಷ್ಣ ಮಠದಿಂದ ಹೊರಟ ಮೆರವಣಿಗೆ ಶಾಲಾ ರಸ್ತೆಯಾಗಿ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾಮ ಹಾಗೂ ತ್ಯಾಗರಾಜರಸ್ತೆಯಲ್ಲಿರುವ ಶ್ರೀಕೃಷ್ಣ ಮಠಕ್ಕೆ ತೆರಳಿ ಅಲ್ಲಿಂದ ಮಾರ್ಕೆಟ್ ರಸ್ತೆಯಲ್ಲಿರುವ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಮಂದಿರದ ವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ಬೈಪಾಸ್ ರಸ್ತೆಯ ಮೂಲಕ ಹೆದ್ದಾರಿಯಲ್ಲಿ ಸಾಗಿ ಎಸ್.ವಿ.ಎಸ್. ಪ್ರೌಢಶಾಲಾ ಮೈದಾನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭ ರಸ್ತೆಯುದ್ದಕ್ಕು ಅಲ್ಲಲ್ಲಿ ಕಟ್ಟಲಾದ ಮಡಕೆಯನ್ನು ಸ್ಥಳೀಯ ವ್ಯಾಯಾಮ ಶಾಲೆಯ ಪಟುಗಳು ಪಿರಮಿಡ್ ರಚಿಸಿ ಒಡೆಯುವ ಮೂಲಕ ಸಂಭ್ರಮಿಸಿದರು.
ಬಳಿಕ ಮೈದಾನದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು,ಸಂಜೆ ಸಭಾ ಕಾರ್ಯಕ್ರಮ, ನಾಟಕ ಪ್ರದರ್ಶನವು ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸಹಿತ ಹಲವಾರು ಗಣ್ಯರು ಭೇಟಿ ನೀಡಿದರು. ಸಮಿತಿ ಪದಾಧಿಕಾರಿಗಳಾದ ದಯಾನಂದಗೌಡ, ದಿವಸಕರ ಆಚಾರ್ಯ, ರಾಮಚಂದ್ರ, ಸುನೀಲ್ ಕೆ., ಅರುಣ್ ಬಿ., ಲತೇಶ್, ಮುಕೇಶ್, ಅನಿಲ್ ಕೆ., ನಿತೇಶ್, ನವೀನ್ ಬಿ., ಹೇಮಚಂದ್ರ, ಸಚ್ಚಿನ್, ರೋಷನ್, ನಾರಾಯಣ ಮೂಲ್ಯ, ಹರಿಪ್ರಸಾದ್, ಹರೀಶ್ ಬಿ., ದೀಪಕ್ ಬಿ.ಎನ್, ನಿತಿನ್ ಬಿ. ಮತ್ತಿತರರು ಇದ್ದರು.