ಕಸ್ಟಮ್ಸ್ ಕ್ಲಿಯರೆನ್ಸ್ ಚಾರ್ಜ್ ಪಾವತಿ ನೆಪದಲ್ಲಿ ಲಕ್ಷಾಂತರ ರೂ. ಮೋಸ
Tuesday, August 19, 2025
ಬಂಟ್ವಾಳ: ಎಷ್ಟರವರೆಗೆ ಮೋಸ ಮಾಡುವವರು ಇರುತ್ತಾರೋ ಅಷ್ಟರವರೆಗೆ ಮೋಸಹೋಗುವವರು ಇದ್ದಾರೆ. ಇಲ್ಲೋರ್ವರು ಕಸ್ಟಮ್ಸ್ ಕ್ಲಿಯರೆನ್ಸ್ ಚಾರ್ಜ್ ಪಾವತಿ ನೆಪದಲ್ಲಿ ಲಕ್ಷಾಂತರ ರೂ. ಕಳೆದುಕೊಂಡು ಮೋಸ ಹೋಗಿರುವ ಪ್ರಕರಣವೊಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಬ್ದುಲ್ ಜಬ್ಬಾರ್ ಎಂಬವರು ಯಾವ ಗಿಷ್ಟ್, ಫಾರಿನ್ ಕರೆನ್ಸಿಯು ಇಲ್ಲದೆ ಸುಮಾರು 3,82,200 ರೂ. ಕಳೆದುಕೊಂಡ ಮೋಸಹೋಗಿದ್ದಾರೆ.
ವ್ಯಕ್ತಿಯೊಬ್ಬ ದೆಹಲಿ ವಿಮಾನ ನಿಲ್ದಾಣದಿಂದ ಕರೆ ಮಾಡಿ ತನಗೆ ಒಂದು ಪಾರ್ಸೆಲ್ ಬಂದಿದ್ದು, ಅದರ ಕಸ್ಟಮ್ಸ್ ಕ್ಲಿಯರೆನ್ಸ್ ಚಾರ್ಜ್ 1,65 ಲ.ರೂ. ಪಾವತಿಗೆ ತಿಳಿಸಿದ್ದರಿಂದ ಇದನ್ನು ಪಾವತಿ ಮಾಡಿದ್ದು, ಬಳಿಕ ಅಪರಿಚಿತ ವ್ಯಕ್ತಿ ಹಂತ ಹಂತವಾಗಿ ಬ್ಯಾಂಕ್ ಖಾತೆಗೆ ಒಟ್ಟು 3,82,200 ರೂ. ಪಾವತಿಸಿದ್ದಾರೆ.
ಫಾರಿನ್ ಕರೆನ್ಸಿಯನ್ನು ಕೊರಿಯರ್ ಮೂಲಕ ಕಳುಹಿಸಿಕೊಡುವುದಾಗಿ ಹೇಳಿದ್ದ ಅಪರಿಚಿತ ಹಣವನ್ನು ಪಡೆದು ಯಾವುದೇ ಗಿಪ್ಟ್ ಹಾಗೂ ಫಾರಿನ್ ಕರೆನ್ಸಿಯನ್ನು ಕಳುಹಿಸದೇ ಮೋಸ ಮಾಡಿರುವುದಾಗಿ ಸಿಇಎನ್ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.