
ಜೀವ ಬೆದರಿಕೆ: ಕೇಸು ದಾಖಲು
Sunday, August 3, 2025
ಬಂಟ್ವಾಳ: ರಸ್ತೆ ಬದಿಯಲ್ಲಿ ಕೆಟ್ಟುನಿಂತ ವಾಹನವೊಂದು ಜಗಳಕ್ಕೆ ಕಾರಣವಾಗಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿ.ಸಿ.ರೋಡಿಗೆ ಸಮೀಒದ ಶಾಂತಿ ಅಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಪರ್ಲಿಯಾ ನಿವಾಸಿ ಮುಹಮ್ಮದ್ ನಜೀಭ್ ಎಂಬವರ ಮೇಲೆ ಬದ್ರುದ್ದೀನ್, ಮುಸ್ತಾಪ ಯಾನೆ ಸೋಡ, ನೌಫಲ್ ಮತ್ತು ಮಹಮ್ಮದ್ ಸಫ್ವಾನ್ ಎಂಬವರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗೆಯೇ ನಜೀಭ್ ಅವರ ತಂದೆಗೂ ಬೆದರಿಕೆ ಹಾಕಿದ್ದಲ್ಲದೆ ದ್ವಿಚಕ್ರ ವಾಹನವನ್ನು ಜಖಂಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮುಹಮ್ಮದ್ ಅವರ ತಂದೆಯ ಬೊಲೆರೊ ವಾಹನ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿರುವುದೇ ಘಟನೆಗೆ ಕಾರಣವಾಗಿದೆ ಎಂದು ದೂರಿನಲ್ಲಿಯೂ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.